Recent Posts

Monday, January 20, 2025
ಸುದ್ದಿ

ರಾಷ್ಟಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಪ.ಪೂ ಕಾಲೇಜಿಗೆ 5 ಚಿನ್ನ ಹಾಗೂ ಒಂದು ಬೆಳ್ಳಿ ಪದಕ – ಕಹಳೆ ನ್ಯೂಸ್

ಪುತ್ತೂರು : ಮಧ್ಯಪ್ರದೇಶದ ದೇವಸ್‌ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿ 5 ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗಳಿಸುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಐದು ವಿದ್ಯಾರ್ಥಿಗಳು ಎಸ್‌ಜಿಎಫ್‌ಐ( ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ) ಗೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕರ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗಳಿಸಿರುವ ದ್ವಿತೀಯ ಪಿಯುಸಿ ಕಲಾ ವಿಭಾಗದ ಅರುಣ್ ಕುಮಾರ್ ಎಂ (ಪುತ್ತೂರಿನ ಅಮ್ಚಿನಡ್ಕದ ಮಾಡ್ನೂರು ಗ್ರಾಮದ ರಮೇಶ್ ಎ ಎಂ ಮತ್ತು ಲಲಿತಾ ದಂಪತಿ ಪುತ್ರ), ವಾಣಿಜ್ಯ ವಿಭಾಗದ ಪುಣ್ಯ(ಪುತ್ತೂರಿನ ಹಾರಾಡಿಯ ರಾಧಾಕೃಷ್ಣ ಬಿ ಮತ್ತು ಸುನಿತಾ ಆರ್ ಎನ್ ದಂಪತಿ ಪುತ್ರಿ), ಪ್ರಾಪ್ತಿ ಕೆ ಎಸ್ (ಬಲ್ನಾಡು ಗ್ರಾಮದ ಉಜಿರುಪಾದೆ ಸೀತಾರಾಮ ಗೌಡ ಮತ್ತು ದೇವಿಕಾ ಕೆ ದಂಪತಿ ಪುತ್ರಿ),ವಿಜ್ಞಾನ ವಿಭಾಗದ ವಿನೀಶ್ ಕುಮಾರ್ ಎಸ್ (ಮೈಸೂರಿನ ಹೆಗ್ಗಡೆ ದೇವನ ಕೋಟೆಯ ಸುರೇಶ್ ಎನ್ ಮತ್ತು ಮೀನಾಕ್ಷಿ ದಂಪತಿ ಪುತ್ರ), ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಅದ್ವಿತ್ ಶರ್ಮ (ಪುತ್ತೂರಿನ ನೆಲ್ಲಿಕಟ್ಟೆಯ ಸುಧೀರ್ ಬಿ. ಎಸ್ ಮತ್ತು ಲತಾ ದಂಪತಿ ಪುತ್ರ), ಮತ್ತು ಬೆಳ್ಳಿ ಪದಕ ಗಳಿಸಿದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಚೇತನ್ ಎನ್ ಆರ್(ಕಾವು ರಾಜೇಶ್ ಎಚ್ ಮತ್ತು ಲೀಲಾವತಿ ಎನ್ ಎಂ ದಂಪತಿ ಪುತ್ರ) ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಈ ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು