Recent Posts

Monday, January 20, 2025
ಸುದ್ದಿ

ಮಂಗಳೂರು: ಆಭರಣ ಜ್ಯುವೆಲರ್ಸ್ ಗೆ ಬೆಳ್ಳಂಬೆಳಗ್ಗೆ ಐಟಿ ದಾಳಿ – ಕಹಳೆ ನ್ಯೂಸ್

ಮಂಗಳೂರು ; ಐಟಿ ಅಧಿಕಾರಿಗಳು ಆಭರಣ ಜ್ಯುವೆಲರ್ಸ್ ಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಏಕಕಾಲದಲ್ಲಿ ಉಡುಪಿ ಸೇರಿದಂತೆ ಮಂಗಳೂರಿನ ಹಲವಾರು ಮಳಿಗೆಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ ಜಿಲ್ಲೆಯ ಬೆಳ್ತಂಗಡಿ, ಮಂಗಳೂರಿನ ಶಿವಭಾಗ್ ಕೊಟ್ಟಾರ ಹಾಗೂ ಉಡುಪಿಯ ಹಲವಡೆ ಆಭರಣ ಜ್ಯುವೆಲ್ಲರಿ ಮಳಿಗೆಗಳಿವೆ. ಈ ಎಲ್ಲಾ ಮಳಿಗೆಗಳಿಗೂ ಏಕಕಾಲದಲ್ಲಿ ಐಟಿ ರೈಡ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಭರಣ ಜ್ಯುವೆಲ್ಲರಿಗಳಲ್ಲಿ ಐಟಿ ಅಧಿಕಾರಿಗಳು ತಪಾಸಣೆಯಲ್ಲಿ ನಿರತರಾಗಿದ್ದಾರೆ.ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆಗಳನ್ನು ವಶಕ್ಕೆ ಪಡೆದು ಐಟಿ ತಂಡ ರೈಡ್ ಮಾಡಿದೆ. ರಾಜ್ಯದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಆಭರಣ ಜ್ಯುವೆಲ್ಲರಿ ಮಳಿಗೆಗಳಿವೆ. ಆಭರಣ ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದ ಜ್ಯುವೆಲ್ಲರಿಯಾಗಿದೆ.