ಕಲ್ಲಡ್ಕ : ಶೈಕ್ಷಣಿಕ ವಿಚಾರಗಳ ಸಂಬoಧಿತವಾದ ಒಳ್ಳೆಯ ಚರ್ಚೆಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ . ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳಯ ಭಾವನೆ, ಸಂಬoಧ ಇರಬೇಕು ಆಗ ಮಾತ್ರ ಶೈಕ್ಷಣಿಕವಾಗಿ ಹಾಗೂ ಭೌತಿಕ ಅಭಿವೃದ್ಧಿ ಪಡಿಸಲು ಸಾಧ್ಯಗುತ್ತದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ.ಬAಟ್ವಾಳ ತಾಲೂಕು ವೀರಕಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ, ಇಲ್ಲಿ ನಡೆದ ಸಮುದಾಯದತ್ತ ಕಾರ್ಯಕ್ರಮದ ಶಾಲಾ ಶಿಕ್ಷಕ ರಕ್ಷಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಪೋಷಕರೊಂದಿಗೆ ಮುಕ್ತವಾಗಿ ಚರ್ಚಿಸಿ ಸಲಹೆ ಅಭಿಪ್ರಾಯವನ್ನು ಪಡೆದು ಸದರಿ ವರ್ಷದ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುದೆಂದು ಪೋಷಕರ ಒಪ್ಪಿಗೆ ಮೇರೆಗೆ ಶಾಲಾಭಿವೃದ್ಧಿ ಸಮಿತಿಯ ಮೂಲಕ ನಿರ್ಣಯಿಸಲಾಯಿತು
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಸಿಂಗೇರಿ, ಶಾಲಾ ಶಿಕ್ಷಕರುಗಳಾದ ಶಕುಂತಲಾ ಎಂ ಬಿ, ಸಂಗೀತ ಶರ್ಮಾ ಪಿ ಜಿ, ಅನುಷಾ, ಮುರ್ಷಿದ ಬಾನು, ಮಮತಾ ಮೊದಲಾದವರು ಉಪಸ್ಥಿತರಿದ್ದು ಪೋಷಕರ ಪ್ರಶ್ನೆಗಳಿಗೆ ಮಾಹಿತಿಗಳನ್ನು ಹಂಚಿಕೊoಡರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು, ಶಾಲಾಭಿವೃದ್ಧಿಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.