Tuesday, January 21, 2025
ಸುದ್ದಿ

ನಾಳೆ ಮಂಗಳೂರು ನಗರ ಪೊಲೀಸ್‌ ವತಿಯಿಂದ ‘ಡ್ರಗ್ ಮುಕ್ತ ಮಂಗಳೂರು’ ವಾಕಥಾನ್ : ವಿದ್ಯಾರ್ಥಿಗಳಿಗೆ ರೀಲ್ಸ್ ಮೇಕಿಂಗ್ ಸ್ಪರ್ಧೆ ಆಯೋಜನೆ– ಕಹಳೆ ನ್ಯೂಸ್

ಮಂಗಳೂರು : ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಂಗಳೂರು ನಗರದಲ್ಲಿ ಮಂಗಳೂರು ನಗರ ಪೊಲೀಸ್‌ ವತಿಯಿಂದ ‘ಡ್ರಗ್ ಮುಕ್ತ ಮಂಗಳೂರು’ ವಾಕಥಾನ್ ನವೆಂಬರ್ 1 ರಂದು ನಡೆಯಲಿದೆ. ಡ್ರಗ್ಸ್ ಮುಕ್ತ ಮಂಗಳೂರು ಘೋಷವಾಕ್ಯದೊಂದಿಗೆ, ಹಂಪನಕಟ್ಟೆಯಿಂದ ಹೊರಡುವ ವಾಕಥಾನ್ ಮಂಗಳಾ ಸ್ಟೇಡಿಯಂವರೆಗೆ ಸಾಗಿ ಬರಲಿದೆ.

‘ಡ್ರಗ್ ಮುಕ್ತ ಮಂಗಳೂರು’ ವಾಕಥಾನ್ ನಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಮುಖ್ಯವಾಗಿ ಮಂಗಳೂರು ನಗರದ ಹಂಪನಕಟ್ಟೆಯ ಟೌನ್‍ಹಾಲ್ ನಿಂದ ಸಂಜೆ 4 ಗಂಟೆಗೆ ವಾಕಥಾನ್ ಹೊರಡಲಿದ್ದು, ಹಂಪನಕಟ್ಟೆ, ಕೆಎಸ್ ರಾವ್ ರೋಡ್, ನವಭಾರತ್ ಸರ್ಕಲ್, ಪಿವಿಎಸ್, ಲಾಲ್ ಭಾಗ್, ನಾರಾಯಣ ಗುರು ವೃತ್ತದ ಮೂಲಕ ಮಂಗಳಾ ಸ್ಟೇಡಿಯಂಗೆ ತಲುಪಲಿದೆ. ಮಂಗಳೂರು ಪೊಲೀಸ್‌ ಕಮೀಷನರ್ ಅನುಪಮ್ ಅಗರ್‍ವಾಲ್ ಅವರು ಇದರ ನೇತೃತ್ವ ವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡ್ರಗ್ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಡ್ರಗ್ ಜಾಗೃತಿ ಸಂಬಂಧಿತ ವಿಷಯವಾಗಿ ಸ್ಪರ್ಧೆ ಆಯೋಜಿಸಲಾಗಿದೆ. ಪೋಸ್ಟರ್‌ ಮೇಕಿಂಗ್ ಹಾಗೂ ರೀಲ್ಸ್ ಮೇಕಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ 8 ಸಾವಿರ ಹಾಗೂ ದ್ವಿತೀಯ 5 ಸಾವಿರ ಹಾಗೂ ತೃತೀಯ 3 ಸಾವಿರ ನಗದು ಬಹುಮಾನ ಸಿಗಲಿದೆ ಎಂದು ತಿಳಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗಾಗಿ ಕಂಟ್ರೋಲ್ ರೂಂ ಸಂಖ್ಯೆ 9480802321 ಸಂಪರ್ಕಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು