Recent Posts

Sunday, January 19, 2025
ಸುದ್ದಿ

ಅನಿತಾ ಕುಮಾರಸ್ವಾಮಿ ಧರ್ಮಸ್ಥಳ ಮಂಜುನಾಥಸ್ವಾಮಿ ಸನ್ನಿಧಿಗೆ ಭೇಟಿ – ಕಹಳೆ ನ್ಯೂಸ್

ಬೆಳ್ತಂಗಡಿ: ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ರಾಮನಗರ ಉಪಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಲಿರುವ ಹಿನ್ನಲೆಯಲ್ಲಿ ಶುಕ್ರವಾರ ಧರ್ಮಸ್ಥಳಕ್ಕೆ ಆಗಮಿಸಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಶತ ರುದ್ರಾಭಿಷೇಕ ಪೂಜೆ ಹಾಗೂ ಬಿ. ಫಾರಂನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿದರು.

ದೇವರಿಗೆ ಸೇವ, ಪ್ರಾರ್ಥನೆ ಸಲ್ಲಿಸಿ, ಬಳಿಕ ಹೆಗ್ಗಡೆಯವರ ನಿವಾಸದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಧರ್ಮಸ್ಥಳ ದ ಹೇಮಾವತಿ ವಿ. ಹೆಗ್ಗಡೆ, ಹರ್ಷೇಂದ್ರ ಕುಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಸುಳ್ಯ ಜೆಡಿಎಸ್ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಜೊತೆಗೆ ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಧರ್ಮಸ್ಥಳದ ಹೆಲಿಪ್ಯಾಡ್‍ನಲ್ಲಿ ಕ್ಷೇತ್ರದ ವತಿಯಿಂದ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರುಶೆಟ್ಟಿ, ದೇವಳದ ಪಾರುಪತ್ಯಾಗಾರ ಲಕ್ಷ್ಮೀ ನಾರಾಯಣ ರಾವ್, ದೇವಳ ಕಚೇರಿಯ ಪ್ರಬಂಧಕರಾದ ಪಾಶ್ರ್ವನಾಥ, ಹರೀಶ ರಾವ್ ಕ್ಷೇತ್ರದ ಪದ್ದತಿಯಂತೆ ಸ್ವಾಗತಿಸಿದರು. ಈ ಸಂದರ್ಭ ದ.ಕ. ಎಸ್‍ಪಿ ಡಾ. ರವೀಕಾಂತೇ ಗೌಡ, ಸಿಪಿಐ ಸಂದೇಶ್, ಧರ್ಮಸ್ಥಳ ಹಾಗೂ ಬೆಳ್ತಂಗಡಿ ಎಸ್‍ಐ ಅವಿನಾಶ್ ಮತ್ತು ರವಿ ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ 10-15ಕ್ಕೆ ಹೆಲಿಕ್ಯಾಪ್ಟರ್‍ನಿಂದ ಧರ್ಮಸ್ಥಳಕ್ಕೆ ಬಂದಿಳಿದ ಅನಿತಾ ಕುಮಾರಸ್ವಾಮಿ ಹೆಲಿಪ್ಯಾಡ್‍ನಿಂದ ನೇರವಾಗಿ ಸನ್ನಿಧಿ ಅತಿಥಿ ಗೃಹಕ್ಕೆ ತೆರಳಿ ಅಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು, ಶ್ರೀ ಮಂಜುನಾಥಸ್ವಾಮಿಯ ದೇವರ ದರುಶನಕ್ಕೆ ತೆರಳಿದರು. ದೇವರ ದರ್ಶನ ಮುಗಿಸಿ, 11-40ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿ ತೆರಳಿದರು.