Thursday, January 23, 2025
ಸುದ್ದಿ

ನಿವೃತ್ತ ಡಿವೈಎಸ್‍ಪಿಯವರ ನಿವಾಸದಲ್ಲಿ ಬ್ಯೂಟಿ ಪಾರ್ಲರ್ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ : ಐವರು ಯುವತಿಯರ ರಕ್ಷಣೆ – ಕಹಳೆ ನ್ಯೂಸ್

ಮೈಸೂರು: ಬ್ಯೂಟಿ ಪಾರ್ಲರ್ ನೆಪದಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, ಐವರು ಯುವತಿಯರನ್ನು ರಕ್ಷಿಸಿ, ಇಬ್ಬರು ವಿಟ ಪುರುಷರನ್ನು ಬಂಧಿಸಿದ್ದಾರೆ.

ಲಲಿತ ಮಹಲ್ ನಗರದಲ್ಲಿರುವ ನಿವೃತ್ತ ಡಿವೈಎಸ್‍ಪಿಯವರ ನಿವಾಸದಲ್ಲಿ ದುನಿಯಾ ಫ್ಯಾಮಿಲಿ ಸಲೂನ್ ನಡೆಸಲಾಗುತ್ತಿತ್ತು. ಆರೋಪಿಗಳು ಬ್ಯೂಟಿ ಪಾರ್ಲರ್ ನೆಪದಲ್ಲಿ ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೆÇಲೀಸರು ದಾಳಿ ನಡೆಸಿದ್ದಾರೆ. ಮಹೇಶ್, ಚೈತ್ರಾ ಈ ದಂಧೆಯ ಕಿಂಗ್‍ಪಿನ್‍ಗಳಾಗಿದ್ದು, ಇವರಿಬ್ಬರ ಮೇಲೆ ಈ ಹಿಂದೆಯೂ ಅನೇಕ ಪ್ರಕರಣಗಳು ದಾಖಲಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೆÇಲೀಸರು, ಹಾಗೂ ಮೈಸೂರಿನ ಖ್ಯಾತ ಓಉಔ ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಆಲನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೃತ್ತ ಪೆÇಲೀಸ್ ಅಧಿಕಾರಿ, ತಾವು ವಾಸವಿರುವ ಮನೆಯಲ್ಲೇ ಮಾಂಸ ದಂಧೆಗೆ ಅವಕಾಶ ಮಾಡಿಕೊಟ್ಟರೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ. ತನಿಖೆ ಮುಂದುವರಿದಿದೆ ಎಂದು ನಗರ ಪೆÇಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು