Thursday, January 23, 2025
ಸುದ್ದಿ

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡರಾಜ್ಯೋತ್ಸವ ಹಾಗೂ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ 50ನೇ ವರ್ಷದ ಕನ್ನಡರಾಜ್ಯೋತ್ಸವವನ್ನು ಆಚರಿಸಲಾಯಿತು.ಜೊತೆಗೆ ನವೆಂಬರ್‌ನಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ, ಭಜನೆಯೊಂದಿಗೆಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


“ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿ ನಾಡುಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳು, ಹರಿಯುವ ನದಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆಒಂದು ಧೀಮಂತ ಶಕ್ತಿ ಇದೆ. ಈ ಸುಂದರ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರಅದೃಷ್ಟ.ಹಾಗೇಯೇಕನ್ನಡ ಶಾಲೆಯಲ್ಲಿದ್ದು ಈ ಹಬ್ಬವನ್ನುತುಂಬೂಅಭಿಮಾನ ಹಾಗೂ ಹಕ್ಕಿನಿಂದಆಚರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ.ಅಷ್ಟೇ ಅಲ್ಲ, ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆಕನ್ನಡವನ್ನು ಕಲಿಸಿ ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು.ಕನ್ನಡ ನಾಡಿನಜವಾಬ್ದಾರಿಯುತ ಪ್ರಜೆಯಾಗಿ ನಿತ್ಯಕನ್ನಡದಲ್ಲೇ ವ್ಯವಹರಿಸುತ್ತೇನೆ. ಕನ್ನಡೇತರರಿಗೆಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾಕಟಿಬದ್ದರಾಗಿರುತ್ತೇವೆಎಂದುದೃಢ ನಿರ್ಧಾರ ಮಾಡೋಣ”ಎನ್ನುತ್ತಾಕನ್ನಡರಾಜ್ಯೋತ್ಸವದ ಮಹತ್ವವನ್ನುಶ್ರೀರಾಮ ಪ್ರೌಢಶಾಲೆಯ ಕಲಾ ಅಧ್ಯಾಪಕಜಿನ್ನಪ್ಪತಿಳಿಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಸಾವಿರ ವಿದ್ಯಾರ್ಥಿಗಳು ನಮ್ಮನಾಡಗೀತೆ, “ಜಯ ಭಾರತಜನನೀಯತನುಜಾತೆ.ಜಯ ಹೇ ಕರ್ನಾಟಕ ಮಾತೆ’ಯನ್ನುಒಕ್ಕೊರಲಿನಿಂದಹಾಡಿದರು. ನಂತರ 3 ಮತ್ತು 4ನೇ ತರಗತಿಯ ವಿದ್ಯಾರ್ಥಿಗಳಿಂದ ‘ಜೋಗದ ಸಿರಿ ಬೆಳಕಿನಲ್ಲಿ’ ಗೀತಗಾಯನ ನಡೆಯಿತು.

ನಂತರ ಹುಟ್ಟುಹಬ್ಬಆಚರಿಸುವ ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃಂದದವರುಆರತಿ, ಅಕ್ಷತೆ, ತಿಲಕಧಾರಣೆ ಮಾಡಿ, ಸಿಹಿ ನೀಡಿದರು.ವಿದ್ಯಾರ್ಥಿಗಳು ನಿಧಿ ಸಮರ್ಪಣೆ ಮಾಡಿದರು.ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರವಿರಾಜ್‌ಕಣಂತೂರುಉಪಸ್ಥಿತರಿದ್ದರು.