Wednesday, January 22, 2025
ಸುದ್ದಿ

ಸಹಕಾರ ರತ್ನ ,ಹಿರಿಯ ಸಾಹಿತಿ ದಂಬೆಕ್ಕಾನ ಸದಾಶಿವ ರೈ ಯವರಿಗೆ ಸನ್ಮಾನ – ಕಹಳೆ ನ್ಯೂಸ್

ಪುತ್ತೂರು: ಇತ್ತೀಚೆಗೆ ಉಡುಪಿ ಜಿಲ್ಲೆಯ ಅಮ್ಮಣ್ಣೆ ರಾಮಣ್ಣ ಸಭಾ ಭವನದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ಜಾಗತಿಕ ಬಂಟರ ಸಂಘ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಸಹಕಾರಿ ರತ್ನ ಪ್ರಶಸ್ತಿ ವಿಜೇತರಾದ ದಂಬೆಕ್ಕಾನ ಸದಾಶಿವ ರೈ ಯವರು ರಚಿಸಿದ ಬಂಟರಮದುವೆ ಎಂಬ ಪುಸ್ತಕ ರಚನೆಗಾಗಿ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಬಂಟರ ಆಚಾರ ,ವಿಚಾರಗಳನ್ನು ಸಮಾಜಕ್ಮೆ ಪರಿಚಯಿಸುವ ಮಾಹಿತಿಯನ್ನೊಳಗೊಂಡ ಬಂಟ ಮದುವೆ ಪುಸ್ತಕ ಸಮಾಜಕ್ಕೆ ನೀಡಿದ ಉತ್ತಮ ಕೊಡುಗೆಯಾಗಿದ್ದು ಈ ಕಾರಣಕ್ಕೆ ಅವರನ್ನು ಸನ್ಮಾನಿಸಲಾಯಿತು. ಜಾಗತಿಕ ಬಂಟರ ಸಂಘಗಳ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರಶೆಟ್ಟಿ, ಕೋಶಾಧಿಕಾರಿ ಉಲ್ತಾರು ಮೋಹನದಾಸ ಶೆಟ್ಟಿ,ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರೂ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಈ ವೇಳೆ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು