Thursday, January 23, 2025
ಸುದ್ದಿ

ಇಟಲಿಯಲ್ಲಿ ಹಸೆಮಣೆ ಏರಿದ ವರುಣ್ ತೇಜ್-ಲಾವಣ್ಯ ತ್ರಿಪಾಠಿ – ಕಹಳೆ ನ್ಯೂಸ್

ತಾರಾ ಜೋಡಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇಟಲಿಯ ಟಸ್ಕನಿಯ ಬೋರ್ಗೊ ಸ್ಯಾನ್ ಫೆಲಿಸ್ ಹೋಟೆಲ್‍ನಲ್ಲಿ ಹಸೆಮಣೆ ಏರಿದ್ದಾರೆ. ಅದ್ಧೂರಿ, ಆಕರ್ಷಕ ಸಮಾರಂಭದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು


ಹಿಂದೂ ಸಂಪ್ರದಾಯಗಳ ಪ್ರಕಾರ ನಡೆದ ಮದುವೆಯಲ್ಲಿ ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ತಾರ ಬಳಗವೇ ಭಾಗಿಯಾಗಿತ್ತು.
ನವದಂಪತಿಗಳಾದ ವರುಣ್ ಮತ್ತು ಲಾವಣ್ಯ ತಮ್ಮ ಬದುಕಿನ ವಿಶೇಷ ದಿನದಂದು ಆಕರ್ಷಕವಾಗಿ ಕಾಣುತ್ತಿದ್ದರು. ವಧು ಲಾವಣ್ಯ ತ್ರಿಪಾಠಿ ಕೆಂಪು ಸೀರೆಯಲ್ಲಿ ಕಂಗೊಳಿಸಿದರೆ, ವರುಣ್ ತೇಜ್ ದಂತ ಬಣ್ಣದ ಶೇರ್ವಾನಿಯಲ್ಲಿ ಸಖತ್ ಲುಕ್ ಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ವರುಣ್ ತೇಜ್ ಸೋದರ ಸಂಬಂಧಿಗಳಾದ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್, ಚಿಕ್ಕಪ್ಪ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ತಮ್ಮ ಕುಟುಂಬಸ್ಥರೊಂದಿಗೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.