Saturday, January 25, 2025
ಸುದ್ದಿ

ಮಟ್ಟು ಸೇತುವೆ ಕೂಡು ರಸ್ತೆ ನಿರ್ಮಾಣಕ್ಕೆ ಜಮೀನು ನೀಡಿ ಸಹಕರಿಸಿದವರಿಗೆ ಪರಿಹಾರದ ಚೆಕ್ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ – ಕಹಳೆ ನ್ಯೂಸ್

ಸುಮಾರು ಹನ್ನೊಂದು ಕೋಟಿ ರೂ ವೆಚ್ಚದ ಮಟ್ಟು ಸೇತುವೆ ಹಾಗೂ ಕೂಡು ರಸ್ತೆ ವಿಸ್ತರಣೆ ಯೋಜನೆಗೆ ನೇರ ಖರೀದಿಯಲ್ಲಿ ಜಾಗ ನೀಡಿರುವ ಭೂ ಸಂತ್ರಸ್ತರಿಗೆ ಕೆಆರ್ ಡಿಸಿಎಲ್ ವತಿಯಿಂದ ಗುರುವಾರ ಪರಿಹಾರದ ಚೆಕ್ ವಿತರಿಸಲಾಯಿತು.


ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಈ ಯೋಜನೆಗೆ ಜಮೀನು ನೀಡಿರುವ 4 ಮಂದಿ ಸಂತ್ರಸ್ತರಿಗೆ 58 ಲಕ್ಷ ರೂ ಮೊತ್ತದ ಚೆಕ್ ವಿತರಿಸಿದರು. ಬಳಿಕ ಭೂಸಂತಸ್ತರು ನೊಂದಣಿ ಇಲಾಖೆಯಲ್ಲಿ ತಮ್ಮ ಭೂಮಿ ಯನ್ನು ಸಂಸ್ಥೆಗೆ ನೋಂದಣಿ ಮಾಡಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ್ರಸ್ತರ ಪರ ವಕೀಲ ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು ನೇರ ಖರೀದಿ ಮೊತ್ತವನ್ನು 1.5 ಲಕ್ಷ ರೂಗೆ ಏರಿಸುವಲ್ಲಿ ವಿಶೇಷವಾಗಿ ಪ್ರಯತ್ನಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಆರ್ ಡಿಸಿಎಲ್‌ನ ಎಡಬ್ಲ್ಯೂಇ. ಹೇಮಂತ್ ಕುಮಾರ್, ಎ.ಇ. ಸುನಿಲ್, ಉಡುಪಿಯ ಹಿರಿಯ ಉಪನೊಂದಣಾಧಿ ಕಾರಿ ಪಣೀಂದ್ರ, ನ್ಯಾಯವಾದಿ ಕೋಟೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್ ಮಟ್ಟು, ಕೋಟೆ ಗ್ರಾ.ಪಂ ಸದಸ್ಯ ನಾಗರಾಜ್ ಗುರುಪ್ರಸಾದ್, ಎಂಜಿನಿಯರ್ ಮೆಂಡನ್, ವಕೀಲ ಯೋಜನೆಯ ಸಂತೋಷ್, ಭೂಸಂತ್ರಸ್ತರಾದ ಮೋಹನ್ ಬಂಗೇರ, ಉದಯ ಬಂಗೇರ, ಹರೀಶ್, ದಯಾನಂದ ಕರ್ಕೇರ ಉಪಸ್ಥಿತರಿದ್ದರು.