Saturday, January 25, 2025
ಸುದ್ದಿ

ಬೆಕ್ಕಿನಂತಾಗಲು ಇದುವರೆಗೆ 20 ಶಸ್ತ್ರಚಿಕಿತ್ಸೆಗೆ ಒಳಗಾದ ಇಟೇಲಿಯ ಯುವತಿ ಚಿಯಾರಾ ಡೆಲ್ – ಕಹಳೆ ನ್ಯೂಸ್

ಯುವತಿಯೊಬ್ಬಳು ತಾನು ಬಯಸಿದಂತೆ ಬೆಕ್ಕಿನಂತಾಗಲು 11ನೇ ವಯಸ್ಸಿನಿಂದಲೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಸುದ್ದಿ ಈಗ ಸದ್ದು ಮಾಡುತ್ತಿದೆ. ಇಟೇಲಿಯಾ ಚಿಯಾರಾ ಡೆಲ್ ಅಬೇಟ್ ಎನ್ನುವ 22 ವರ್ಷದ ಯುವತಿ ಈಗಾಗಲೇ ಬೆಕ್ಕಿನಂತೆ ರೂಪಾಂತರಗೊಳ್ಳಲು ತನ್ನ ದೇಹದ ಮೇಲೆ 20 ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದಾಗಿ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಯಾರಾ ಡೆಲ್ ತನ್ನ 11ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಬೆಕ್ಕಿನಂತೆ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ಪ್ರಾರಂಭಿಸಿದಳು. ಪ್ರಸ್ತುತ, ಈ ಯುವತಿಯ ದೇಹದಲ್ಲಿ ಸುಮಾರು 72 ಹೊಲಿಗೆಗಳಿವೆ. ದೇಹದ ಮಾರ್ಪಾಡುಗಳ ಭಾಗವಾಗಿ ಚಿಯಾರಾ ಬೆಕ್ಕಿನಂತೆ ಕಾಣುತ್ತಾಳೆ. ಅವಳಿಗೆ ಹಲವಾರು ಚುಚ್ಚು ಮದ್ದು, ಮೂಗು ಮತ್ತು ನಾಲಿಗೆಯಲ್ಲಿ ರಂಧ್ರಗಳು. 0.8-ಸೆಂ ತುಟಿ ಚುಚ್ಚುವಿಕೆ, 1.6-ಸೆಂ ಒಳಗಿನ ಚುಚ್ಚುವಿಕೆಯನ್ನು ಮಾಡಲಾಗಿದೆ. ಈಕೆ ಬ್ಲೆಫೆರೊಪ್ಲ್ಯಾಸ್ಟಿಗೆ ಒಳಗಾಗಿದ್ದಳು. ಇದು ಮೇಲಿನ ಅಥವಾ ಕೆಳಗಿನ ಕಣ್ಣುರೆಪ್ಪೆಗಳ ಮೇಲೆ ನಡೆಸುವ ಚಿಕಿತ್ಸೆಯಾಗಿದೆ. ವಾಸ್ತವವಾಗಿ ಈ ಚಿಕಿತ್ಸೆಯನ್ನು ಕಣ್ಣಿನ ರೆಪ್ಪೆಯ ದೋಷಗಳು, ವಿರೂಪಗೊಳಿಸಲು, ವಿರೂಪಗಳನ್ನು ಸರಿಪಡಿಸಲು ಕಣ್ಣಿನ ಪ್ರದೇಶವನ್ನು ಹೆಚ್ಚು ಸೌಂದರ್ಯವಾಗಿ ಕಾಣುವಂತಾಗಲು ಮಾಡಲಾಗುತ್ತದೆ. ಕಣ್ಣುಗುಡ್ಡೆ, ಹಚ್ಚೆಗಳು, ಕಿವಿಗಳು, ಶಾಶ್ವತ ಐಲೈನರ್, ಹಣೆಯ ಇಂಪ್ಲಾAಟ್‌ಗಳು ಮತ್ತು ಉಗುರುಗಳು ಬೆಕ್ಕಿನಂತೆ ಕಾಣಲು ಚಿಕಿತ್ಸೆ ಪಡೆದಿದ್ದಾಳೆ.