Recent Posts

Monday, January 27, 2025
ಸುದ್ದಿ

1753 ನೇ ಮದ್ಯವರ್ಜನ ಶಿಬಿರ ವಿಧ್ಯುಕ್ತ ಚಾಲನೆ , 105ಕ್ಕು ಹೆಚ್ಚಿನ ಶಿಭಿರಾರ್ಥಿಗಳು ಭಾಗಿ – ಕಹಳೆ ನ್ಯೂಸ್

ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಜ್ಜಾವರ ಹಾಗೂ ಇತರೆ ಸಂಘ ಸಂಸ್ಥೆಗಳ ಸಹೋಗಯೊಂದಿಗೆ ಅಜ್ಜಾವರ ಶ್ರೀ ಮಹೀಷಮರ್ಧಿನಿ ದೇವಾಲದ ಬಳಿಯಲ್ಲಿ ಜರುಗುತ್ತಿರುವ 1753 ನೇ ಮದ್ಯವರ್ಜನ ಶಿಬಿರವು ವಿದ್ಯುಕ್ತವಾಗಿ ಚಾಲನೆ ಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಎ ಬಾಸ್ಕರ ರಾವ್ ಮದ್ಯವರ್ಜನ ಶಿಬಿರವನ್ನು ದೀಪ ಬೆಳಗುವುದರ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕನಾಥ ಅಮೆಚೂರು , ಅಥಿತಿಗಳಾಗಿ ಎನ್ ಎ ರಾಮಚಂದ್ರ , ಶಿವಪ್ರಕಾಶ್ ಅಡ್ಪಂಗಾಯ , ಸುರೇಶ್ ಕಣೆಮರಡ್ಕ , ಪ್ರವೀಣ್ ಕುಮಾರ್ , ಸುಭೋದ್ ಶೆಟ್ಟಿ ಮೇನಾಲ , ಬೇಬಿ ಕಲ್ತಡ್ಕ , ಕುಶಲ ಉದ್ದಂತಡ್ಕ , ಸೀತಾರಾಮ ಯಂ, ಸತ್ಯವತಿ ಬಸವನಪಾದೆ , ಗುರುರಾಜ್ ಅಜ್ಜಾವರ , ವಿನುತಾ ಪಾತಿಕಲ್ಲು ,ರಾಮಕೃಷ್ಣ ರೈ ಪೇರಾಲುಗುತ್ತು , ಶಶ್ಮಿಭಟ್ ಅಜ್ಜಾವರ , ರಾಜೇಶ್ ಶೆಟ್ಟಿ ಮೇನಾಲ ಗಣೇಶ್ ಆಚಾರ್ಯ ಮತ್ತಿತರು ಉಪಸ್ಥಿತರಿದ್ದರು. ಈ ಶಿಭಿರದಲ್ಲಿ ಸುಮಾರು 100ಕ್ಕು ಅಧಿಕ ಮಂದಿ ಶಿಭಿರಾರ್ಥಿಗಳು ಭಾಗವಹಿದ್ದು ಗಮನಾರ್ಹವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು