Recent Posts

Monday, January 20, 2025
ಸುದ್ದಿ

ವೈದ್ಯಾಧಿಕಾರಿಯ ಕಿರುಕುಳ: ಕಿರಿಯ ಆರೋಗ್ಯ ಸಹಾಯಕ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನ – ಕಹಳೆ ನ್ಯೂಸ್

ಉಡುಪಿ: ವೈದ್ಯಾಧಿಕಾರಿಯ ಕಿರುಕುಳದಿಂದ ಕಿರಿಯ ಆರೋಗ್ಯ ಸಹಾಯಕ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ.

ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳ ಹಿಂದೆ ಕಿರಿಯ ಆರೋಗ್ಯ ಸಹಾಯಕನಾಗಿ ನೇಮಕವಾಗಿದ್ದ ನಾಗರಾಜ್(25) ಮೂಲತ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೂಡಲ ವಿಠಲಾಪುರದ ನಿವಾಸಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈತನು ಕರ್ತವ್ಯದ ವಿಚಾರವಾಗಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕಿರುಕುಳ ನೀಡುತ್ತಿದ್ದರೆಂದು ಡಿ.ಎಚ್.ಒಗೆ ದೂರು ನೀಡಿದ್ದರೂ ಪ್ರಯೋಜನ ವಾಗಲಿಲ್ಲ. ಇದರಿಂದ ಮನನೊಂದ ನಾಗರಾಜ್ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾನೆ. ಸದ್ಯ ನಾಗರಾಜ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.