Recent Posts

Tuesday, November 26, 2024
ಸುದ್ದಿ

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಗ್ರೀನ್ ಸಿಗ್ನಲ್ ; ಸಂಸದ ನಳಿನ್ ಮನವಿ ಪುರಸ್ಕರಿಸಿದ ಕೇಂದ್ರ – ಕಹಳೆ ನ್ಯೂಸ್

ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಮನವಿಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಬಹನಿರೀಕ್ಷಿತ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ಧಾರಿ-275ರ (ಮಾಣಿ-ಮೈಸೂರು-ಬೆಂಗಳೂರು ವಿಭಾಗದಲ್ಲಿ) ಕಿ.ಮೀ 0.00 ರಿಂದ ಕಿಮೀ 71.60ರವರೆಗಿನ ರಸ್ತೆಯ ಚತುಷ್ಪಥ ಕಾಮಗಾರಿಗೆ ವಿವರವಾದ ಯೋಜನಾ ವರದಿ (ಡಿ.ಪಿ.ಆರ್), ಕಾರ್ಯಸಾಧ್ಯತೆಯ ಅಧ್ಯಯನ, ಸಮೀಕ್ಷೆ ಮತ್ತು ಭೂ ಯೋಜನೆಯನ್ನು ಸಿದ್ಧಪಡಿಸಲು ಅರ್ಹ ಸಲಹೆಗಾರರಿಂದ ಟೆಂಡರ್ ಆಹ್ವಾನಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಹೆದ್ದಾರಿ – 169ರಲ್ಲಿ ಸಾಣೂರುನಿಂದ ಬಿಕರ್ನಕಟ್ಟೆವರೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿ –75 ಬಿಸಿರೋಡ್ ನಿಂದ–ಅಡ್ಡಹೊಳೆ ವರೆಗಿನ ರಸ್ತೆಗಳ ಮೇಲ್ದರ್ಜೆ ಕಾಮಗಾರಿಗಳು ನಡೆಯುತ್ತಿರುವಾಗಲೇ ಇನ್ನೊಂದು ಪ್ರಮುಖ ಹೆದ್ದಾರಿಯೂ ಮೇಲ್ದರ್ಜೆಗೇರುತ್ತಿರುವುದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.

ಈ ಬಗ್ಗೆ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ಇವರು ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಹಾಗೂ ಕೇಂದ್ರ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರನ್ನು ವಿಶೇಷವಾಗಿ ಅಭಿನಂದಿಸಿದರು.