ವಡ್ ನಗರ: ಗುಜರಾತ್ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎರಡು ದಿನ ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಇಂದು ಹುಟ್ಟೂರಾದ ವಡ್ ನಗರಕ್ಕೆ ಭೇಟಿ ನೀಡಿ ಇಂದ್ರಧನುಷ್ ಯೋಜನೆಗೆ ಚಾಲನೆ ನೀಡಿದರು.
ಗುಂಜಾ ಗ್ರಾಮದಲ್ಲಿ ಸುಮಾರು 6 ಕಿ.ಮೀಗಳಷ್ಟು ರೋಡ್ ಶೋ ನಡೆಸಿದ ಮೋದಿ ಬಳಿಕ ತಾವು ಓದಿದ ಬಿ.ಎನ್. ಹೈಸ್ಕೂಲ್ಗೆ ತೆರಳಿ ಬಾಲ್ಯವನ್ನ ನೆನೆದು ಜ್ಞಾನದೇಗುಲದ ಆವರಣವನ್ನ ವಂದಿಸಿದರು. ಹಟ್ಕೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನಾನು ತವರಿಗೆ ಮತ್ತೆ ಬಂದಿರೋದು ವಿಶೇಷ. ನನ್ನ ಬಾಲ್ಯದ ಹಲವು ನೆನಪುಗಳು ವಡ್ ನಗರದಲ್ಲಿದೆ. ನನ್ನ ಇಂದಿನ ಸ್ಥಾನ, ಮಾನಗಳಿಗೆ ಹುಟ್ಟೂರೇ ಕಾರಣ ಎಂದರು. ಗುಜರಾತ್ನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡುತ್ತೀರುವುದು ನನ್ನ ಅದೃಷ್ಟ ಎಂದು ಹೇಳಿದರು.
ವಡ್ ನಗರ ಐತಿಹಾಸಿಕ ನಗರವಾಗಿದೆ, ಇದು ಪ್ರವಾಸೋದ್ಯಮ ಕೇಂದ್ರವಾಗಲಿದೆ. ಚೀನಾ ಮೂಲದ ವಿದ್ವಾಂಸ ಹ್ಯೂಯೆನ್ ತ್ಸಾಂಗ್ ಇಲ್ಲಿ ಕವಿತೆ ಬರೆದಿದ್ದಾರೆ ಆದ್ದರಿಂದ ವಡ್ ನಗರಕ್ಕೂ ಚೀನಾಗೂ ಐತಿಹಾಸಿಕ ಸಂಬಂಧವಿದೆ ಎಂದರು.
ಭಾರತದ ಸುಧಾರಣೆಗೆ ನಾನು ಶಪಥ ಮಾಡುತ್ತೇನೆ ಎಂದು ಹೇಳಿದ ಅವರು, ದೇಶದಲ್ಲಿ ಆರೋಗ್ಯ ಸೌಲಭ್ಯ ಕೈಗೆಟುಕುವಂತೆ ಮಾಡಲು ಎನ್ಡಿಎ ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಈ ಬಗ್ಗೆ ಕ್ರಮ ಕೈಗೊಂಡಿದ್ದರು. ಬಳಿಕ 10 ವರ್ಷಗಳ ಕಾಲ ಯುಪಿಎ ಸರ್ಕಾರ ಅಭಿವೃದ್ಧಿಯನ್ನ ದ್ವೇಷ ಮಾಡಿತ್ತು. ಆದರೆ, ಈಗ ಮತ್ತೆ ಬಡವರಿಗೆ ಕೈಗೆಟುಕುವಂತೆ ಮಾಡಿದ್ದೇವೆ ಎಂದರು.
ಫೀಲ್ಡ್ ಮಾರ್ಷಲ್ ಕಾರಿಯಪ್ಪರನ್ನ ನೆನದ ಪ್ರಧಾನಿ
ತಮ್ಮ ಭಾಷಣದಲ್ಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪರನ್ನ ಪ್ರಧಾನಿ ಮೋದಿ ನೆನೆದರು. ಕರ್ನಾಟಕದ ಕಾರಿಯಪ್ಪರವರಿಗೆ ಲಕ್ಷಾಂತರ ಸೈನಿಕರು ಹಾಗೂ ಹಲವರು ಸಲ್ಯೂಟ್ ಮಾಡ್ತಿದ್ದರು. ಆದರೆ, ಅವರು ತವರಿಗೆ ಹೋದಾಗ ಅಲ್ಲಿನ ಜನ ನೀಡುವ ಗೌರವ ಕಾರಿಯಪ್ಪರಿಗೆ ತೀವ್ರ ಹರ್ಷ ನೀಡುತ್ತಿತ್ತಂತೆ. ಈ ಬಗ್ಗೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹಲವು ಬಾರಿ ನೆನೆದಿದ್ದಾರೆ. ಅದೇ ರೀತಿ ವಡನಗರದಲ್ಲಿ ಅಧಿಕಾರಿಗಳು ಹಾಗೂ ಪ್ರಮುಖವಾಗಿ ಇಲ್ಲಿನ ಜನರ ಸ್ವಾಗತ ಹಾಗೂ ಗೌರವ ನನಗೆ ಹೆಚ್ಚು ಖುಷಿ ಉಂಟುಮಾಡುತ್ತದೆ ಅಂತ ಪ್ರಧಾನಿ ಮೋದಿ ಹೇಳಿದರು.
You Might Also Like
ವಿದ್ಯಾರಣ್ಯ ಶಾಲೆಯಲ್ಲಿ ಪೋಷಕ-ಶಿಕ್ಷಕ ಒರಿಯೆಂಟೇಶನ್ ಕಾರ್ಯಕ್ರಮ; ಪರೀಕ್ಷಾ ತಯಾರಿಗೆ ಸಮಯ ಹೊಂದಾಣಿಕೆ ಬಹಳ ಮುಖ್ಯ – ಡಾ.ವಿರೂಪಾಕ್ಷ ದೇವರಮನೆ.-ಕಹಳೆ ನ್ಯೂಸ್
ಕುಂದಾಪುರ: "ಮಕ್ಕಳೇ ಹೊಸ ಜಗತ್ತಿನ ನಿಜವಾದ ಸೃಷ್ಟಿಕರ್ತರು.ಮಕ್ಕಳು ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ಶಿಕ್ಷಣ ಮತ್ತು ಮೌಲ್ಯಯುತವಾದ ಮಾಹಿತಿ ಯನ್ನು ಪಡೆದರೆ ಉತ್ತಮ ವ್ಯಕ್ತಿತ್ವವನ್ನು ಹೊಂದಲು ಸಾಧ್ಯವಾಗುತ್ತದೆ.ಮಕ್ಕಳು ಮಾನಸಿಕ...
ಮುಡಾ ಹಗರಣದಲ್ಲಿ ಕೊನೆಗೂ ಇಡಿಯಿಂದ ಕಳಚಿ ಬಿದ್ದ ಸಿದ್ದರಾಮಯ್ಯನವರ ಮುಖವಾಡ ಇನ್ನಾದರೂ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಸಂಸದ ಕ್ಯಾ. ಚೌಟ -ಕಹಳೆ ನ್ಯೂಸ್
ಮಂಗಳೂರು: ಮೈಸೂರಿನ ಮುಡಾದಲ್ಲಿ ನಡೆದ ಅಕ್ರಮಗಳ ಆಳ-ಅಗಲ ಒಂದೊAದಾಗಿಯೇ ಬಯಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈಲಿಗೆ ಹೋಗುವ ಮೊದಲು ಸಿಎಂ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿ ಆ...
ಕುಡಿತ ಬಿಡುವಂತೆ ಬುದ್ಧಿವಾದ ಹೇಳಿದ ಅಪ್ಪನ ಕೊಂದು ಪರಾರಿಯಾಗಿದ್ದವನ ಸೆರೆ -ಕಹಳೆ ನ್ಯೂಸ್
ಬೆಂಗಳೂರು: ಮದ್ಯ ಸೇವಿಸದಂತೆ ಬುದ್ಧಿವಾದ ಹೇಳಿದ ತಂದೆಯನ್ನೇ ಕಬ್ಬಿಣದ ರಾಡ್ನಿಂದ ಹತ್ಯೆಗೈದಿದ್ದ ಪುತ್ರನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರ 4ನೇ ಬ್ಲಾಕ್ ನಿವಾಸಿ ರಘು (29)...
ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಕ್ಷೇತ್ರದಲ್ಲಿ ಐತಿಹಾಸಿಕ ಬ್ರಹ್ಮಕಲಶೋತ್ಸವ ; ಫೆ. 22 ಮತ್ತು 23ರಂದು ಜರಗಲಿರುವ ಹೊರೆ ಕಾಣಿಕೆಯ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆ -ಕಹಳೆ ನ್ಯೂಸ್
ಕಾಪು : ಪುನರ್ ನಿರ್ಮಾಣಗೊಳ್ಳುತ್ತಿರುವ ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಕ್ಷೇತ್ರದಲ್ಲಿ ಐತಿಹಾಸಿಕ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯಲಿರುವ ಹಸಿರು ಹೊರೆ ಕಾಣಿಕೆ, ಸ್ವರ್ಣ ಗದ್ದುಗೆ,...