Saturday, November 23, 2024
ಸುದ್ದಿ

ಎನ್ನೆಂಸಿ ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ವತಿಯಿಂದ ‘ಜೀವನಕ್ಕೆ ಬೆಳಕು- ಧನಾತ್ಮಕ ಮನೋ ಆರೋಗ್ಯ ತರಬೇತಿ’ ಕಾರ್ಯಕ್ರಮ – ಕಹಳೆ ನ್ಯೂಸ್

ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಘಟಕಗಳ ವತಿಯಿಂದ ‘ಜೀವನಕ್ಕೆ ಬೆಳಕು- ಧನಾತ್ಮಕ ಮನೋ ಆರೋಗ್ಯ ತರಬೇತಿ’ ಕಾರ್ಯಕ್ರಮ ಕಾಲೇಜಿನ ದೃಶ್ಯ ಶ್ರವಣ ಕೊಠಡಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಾಲೇಜಿನ ಜೀವವಿಜ್ಞಾನ ಪದವಿ ವಿಭಾಗದ ಹಿರಿಯ ವಿದ್ಯಾರ್ಥಿ ಸುಳ್ಯದ ಎಸ್.ಬಿ ಲ್ಯಾಬೋರೇಟರಿ ಮಾಲಕರಾದ ಶ್ರೀಯುತ ಬಾಲಕೃಷ್ಣ ಎಂ ಉದ್ಘಾಟಿಸಿ ಮಾತನಾಡಿ, ಬದುಕಿನಲ್ಲಿ ಜ್ಞಾನ ಬಹುದೊಡ್ಡ ಆಸ್ತಿ. ನಾವು ಎಲ್ಲಾ ಮೂಲಗಳಿಂದಲೂ ಅತಿಹೆಚ್ಚು ವಿಷಯಗಳನ್ನು ಸಂಗ್ರಹಿಸುತ್ತಿರಬೇಕು. ಯೋಗ್ಯರಾದ ಸಮಾನ ಮನಸ್ಕರ ಜೊತೆ ಬೆರೆತು ಮಾತನಾಡುವುದರಿಂದಲೂ ನಾವು ಸಾಕಷ್ಟು ಕಲಿಯುತ್ತೇವೆ ಎಂದರು. ಹಾಗೆ ಕಾಲೇಜು ದಿನಗಳಲ್ಲಿ ನೇಚರ್ ಕ್ಲಬ್ ಚಟುವಟಿಕೆಗಳಲ್ಲಿ ಭಾಗವಹಿಸಿದ ಅನುಭವ ನೆನಪುಗಳನ್ನು ಹಂಚಿಕೊAಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಖ್ಯಾತ ಮನಶಾಸ್ತ್ರಜ್ಞ, ಪುನರ್ನವ ಟ್ರಸ್ಟ್ ಸ್ಥಾಪಕ ನವೀನ್ ಎಲ್ಲಂಗಳ ತರಬೇತುದಾರರಾಗಿ ಭಾಗವಹಿಸಿದ್ದು, ಇವತ್ತಿನ ನಮ್ಮ ಸ್ಥಿತಿ ನಿನ್ನೆಯ ನಮ್ಮ ಆಲೋಚನೆಗಳಿಂದ ರೂಪಿತವಾಗಿರುತ್ತದೆ. ಸಕಾರಾತ್ಮಕ ಆಲೋಚನೆಗಳನ್ನು ವಿನ್ಯಾಸಗೊಳಿಸಿ ಹವ್ಯಾಸ ಮಾಡಿಕೊಂಡಾಗ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು. ಸಕಾರಾತ್ಮಕ ಆಲೋಚನೆಗಳನ್ನು ಹುಟ್ಟುಹಾಕುವುದು, ಬದುಕಿನ ಗುರಿ ನಿರ್ಧರಿಸುವುದು, ಮನಃಶಕ್ತಿ ಹೆಚ್ಚಿಸಿಕೊಳ್ಳುವುದು, ಓದಿದ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು, ಋಣಾತ್ಮಕ ವಿಚಾರಗಳನ್ನು ಮನಸ್ಸಿಂದ ದೂರಪಡಿಸುವುದು ಇತ್ಯಾದಿ ಅಗತ್ಯ ವಿಚಾರಗಳ ಬಗ್ಗೆ ಮಾಹಿತಿ ನೀಡಿ ಚಟುವಟಿಕೆಗಳ ಮೂಲಕ ತಿಳಿಸಿಕೊಟ್ಟರು. ಕಾಲೇಜಿನ ಗ್ರಂಥಾಲಯಕ್ಕೆ ಉಪಯುಕ್ತ ‘ಒಂದೊಳ್ಳೆ ಮಾತು’ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಂ ಎಂ ವಹಿಸಿದ್ದರು. ವೇದಿಕೆಯಲ್ಲಿ ಪುನರ್ನವ ಟ್ರಸ್ಟ್ ಸಲಹೆಗಾರ ರಂಜಿತ್ ಉಪಸ್ಥಿತರಿದ್ದರು. ನೇಚರ್ ಕ್ಲಬ್ ಸದಸ್ಯೆ ಕು. ಸುಷ್ಮಿತಾ ಸ್ವಾಗತಿಸಿ, ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಚೈತ್ರ ಮತ್ತು ತಂಡದವರು ಪ್ರಾರ್ಥಿಸಿ, ಕು. ಕೀರ್ತಿಕಾ ಅತಿಥಿಗಳನ್ನು ಪರಿಚಯಿಸಿ, ಕು. ಶಿಲ್ಪ ವಂದಿಸಿದರು. ನೇಚರ್ ಕ್ಲಬ್ ಸದಸ್ಯೆ ಕಾಲೇಜು ವಿದ್ಯಾರ್ಥಿ ಸಂಘದ ಸಹ ಕಾರ್ಯದರ್ಶಿ ಕು. ಯಶಿಕ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಾದ ಸತ್ಯಪ್ರಕಾಶ್ ಡಿ, ಕೃತಿಕಾ ಕೆ ಜೆ, ಕೃಪಾ ಎಂ, ಶೋಭಾ ಎ, ಅಶ್ವಿನಿ ಕೆ, ರಂಜಿತಾ ಗಿರೀಶ್, ಮಮ್ತ, ಅಜಿತ್ ಕುಮಾರ್, ಹರ್ಷಕಿರಣ, ಪಲ್ಲವಿ ಮತ್ತು ಬೋಧಕೇತರ ಸಿಬ್ಬಂದಿಗಳಾದ ಭವ್ಯ, ಜಯಂತಿ, ಗೀತಾ, ಪವನ್ ಹಾಗೂ ನೇಚರ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.