Recent Posts

Friday, November 22, 2024
ಸುದ್ದಿ

ಗ್ಯಾರಂಟಿ ಯೋಜನೆ ಜಾರಿ ಬಳಿಕದ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಿ : ಡಾ.ಭರತ್ ಶೆಟ್ಟಿ ವೈ ಆಗ್ರಹ – ಕಹಳೆ ನ್ಯೂಸ್

ಕಾವೂರು: ರಾಜ್ಯದ ಹಣಕಾಸಿನ ವಿಚಾರವಾಗಿ ಸಾರ್ವಜನಿಕರಲ್ಲಿ ಗೊಂದಲ ಅನುಮಾನ,ಗೊಂದಲ ಮೂಡುವಂತಾಗಿದ್ದು, ಸರಕಾರ ಗ್ಯಾರಂಟಿ ಯೋಜನೆಗಳ ಬಳಿಕ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದಕ್ಕೆ ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.

ವಿವಿಧ ಇಲಾಖೆಗಳಲ್ಲಿ ದುಡಿಯುತ್ತಿರುವ ನೌಕರರಿಗೆ ವೇತನ ಪಾವತಿ ವಿಳಂಬವಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಬಿಸಿ ಊಟ ಸೇರಿದಂತೆ ಪೂರಕ ಸೌಲಭ್ಯಗಳಿಗೆ ಹಣಕಾಸಿನ ಕೊರತೆ ಎದುರಾಗಿದ್ದು ಶಿಕ್ಷಕರೇ ಕೈಯಿಂದ ಬರಿಸಿ ಕೆಲಸ ಮಾಡಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಕೆಟ್ಟು ಹೋದ ಸರಕಾರಿ ಬಸ್ಸುಗಳನ್ನು ದುರಸ್ತಿ ಮಾಡಲು ಕೂಡ ಹಿಂದುಮುಂದೆ ನೋಡುವಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗೃಹಲಕ್ಷ್ಮಿ ಭಾಗ್ಯದ 2000 ಹಣವನ್ನ ಖಾತೆಗೆ ಹಾಕಲು ತಾಂತ್ರಿಕ ತೊಂದರೆಯ ಕುಂಟು ನೆಪ ಹೇಳಲಾಗುತ್ತಿದೆ.ಶಾಸಕರುಗಳು ತಮ್ಮ ಕ್ಷೇತ್ರದಲ್ಲಿ ಹೊಸ ಯೋಜನೆ ಘೋಷಣೆ ಮಾಡಲೂ ಹಿಂದೇಟು ಹಾಕುವಂತಾಗಿದೆ.ಅನುದಾನವೂ ಸಿಗದಂತಾಗಿದೆ.
ಈ ಎಲ್ಲಾ ವಿಚಾರಗಳಲ್ಲಿ ಸಾಕಷ್ಟು ಗೊಂದಲ ಉಂಟು ಮಾಡುತ್ತಿದ್ದು ಸರಕಾರ ಶ್ವೇತ ಪತ್ರದ ಮೂಲಕ ಆರ್ಥಿಕ ಸ್ಥಿತಿ ಗತಿಯ ಕುರಿತು ಸಾರ್ವಜನಿಕರಿಗೆ ವಿಶ್ವಾಸವನ್ನು ಮೂಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಜಿಲ್ಲೆಯಲ್ಲಿ ಮರಳು ಸಮಸ್ಯೆ ಬಿಗಡಾಯಿಸಿದ್ದು,ಸರಕಾರದ ಅನುದಾನ ಪಡೆದು ಮನೆ ಕಟ್ಟಿಕೊಳ್ಳುವ ಬಡ ವರ್ಗಕ್ಕೆ ಮರಳು ಸಿಗದೆ ಮನೆ ಕಟ್ಟಲು ಆಗುತ್ತಿಲ್ಲ. ಸರಕಾರ ಮರಳು ಪೂರೈಕೆಗೆ ಬೇಕಾದ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು