ದೆಹಲಿ: ಭಾರತದೊಂದಿಗೆ ಪದೇ ಪದೇ ಕ್ಯಾತೆ ತೆಗೆಯುತ್ತಾ ಭಯೋತ್ಪಾದಕರನ್ನು ಗಡಿ ಮೂಲಕ ಒಳ ನುಗ್ಗಿಸಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಪಾಕಿಸ್ತಾನ, ಈಗ ವಿಶ್ವ ಸಮುದಾಯದ ಮುಂದೆಯೂ ತನ್ನ ಕುಟಿಲ ನೀತಿಗಳಿಂದಾಗಿ ಬೆತ್ತಲಾಗಿದ್ದು, ಆರ್ಥಿಕ ನೆರವಿಗಾಗಿ ಅಂಗಲಾಚುವ ಸ್ಥಿತಿಗೆ ಬಂದು ನಿಂತಿದೆ.
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನಲಾಗಿದ್ದು, ಆರ್ಥಿಕ ಬೆಳವಣಿಗೆಯಲ್ಲಿ ಬಾಂಗ್ಲಾದೇಶಕ್ಕಿಂತಲೂ ಹಿಂದಿದೆ. ಈ ಹಿಂದೆ ಅಮೆರಿಕದಿಂದ ಭಾರಿ ಆರ್ಥಿಕ ನೆರವು ಪಡೆದಿದ್ದ ಪಾಕಿಸ್ತಾನ, ಈಗ ನೆರವು ಸ್ಥಗಿತಗೊಂಡಿರುವ ಕಾರಣದಿಂದಾಗಿ ದಿವಾಳಿಯಂಚಿಗೆ ಬಂದು ನಿಂತಿದೆ ಎನ್ನಲಾಗಿದೆ.
ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪಾಕ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಇಮ್ರಾನ್ ಖಾನ್ ಅವರ ಮುಂದೆ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವ ಕಠಿಣ ಪರಿಸ್ಥಿತಿ ಎದುರಾಗಿದ್ದು, ದಿವಾಳಿಯಿಂದ ತಪ್ಪಿಸಿಕೊಳ್ಳಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮುಂದೆ ಹೊಸ ಸಾಲಕ್ಕಾಗಿ ಪಾಕಿಸ್ತಾನ ಅಂಗಲಾಚಿ ಬೇಡುತ್ತಿದೆ.
ಆದರೆ ಈ ಹಿಂದೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಂದ ಪಡೆದಿದ್ದ ಆರ್ಥಿಕ ನೆರವನ್ನು ಭಯೋತ್ಪಾದನೆಗೆ ಪ್ರೋತ್ಸಾಹ ನೀಡಲು ಬಳಸಿಕೊಂಡಿರುವ ಕಾರಣ ವಿಶ್ವ ಸಮುದಾಯದ ವಿಶ್ವಾಸವನ್ನು ಪಾಕ್ ಕಳೆದುಕೊಂಡಿದೆ. ಇದರಿಂದಾಗಿ ಪಾಕ್ ಬುದ್ದಿ ಕಲಿಯುತ್ತೊ ಗೊತ್ತಿಲ್ಲ ಆದ್ರೆ ಇದೇ ರೀತಿ ಭಯೋತ್ಪಾದನೆ ನಡೆಸಿದ್ರೆ ದಿವಾಳಿ ಯಾಗದೋ ಹಂಡ್ರೆಡ್ ಪರ್ಸೆಂಟ್ ಸತ್ಯ.