ಸುಳ್ಯ : ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸುಳ್ಯ ತಾಲೂಕಿನ ಪಂಜದ ಯುವಕನೊಬ್ಬ ಸಮುದ್ರ ಪಾಲಾದ ಘಟನೆ ಪಾಂಡಿಚೇರಿಯಲ್ಲಿ ನಡೆದಿದೆ.
ಪಂಜದ ಕೂತ್ಕುಂಜ ಗ್ರಾಮದ ಚಿದ್ಗಲ್ಲು ಗೋಪಾಲ್ ಎಂಬವರ ಪುತ್ರ ಬಿಪಿನ್ ನೀರುಪಾಲಾದ ಯುವಕ. ಬಿಪಿನ್ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶನಿವಾರ ಗೆಳೆಯರೊಂದಿಗೆ ಪಾಂಡಿಚೇರಿಗೆ ಹೋಗಿದ್ದ ಬಳಿಕ ಅಲ್ಲಿನ ಬೀಚ್ಗೆ ತೆರಳಿದ ವೇಳೆ ಸಮುದ್ರ ಪಾಲಾಗಿದ್ದಾರೆ. ರವಿವಾರ ಯುವಕನ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.