Friday, January 24, 2025
ಸುದ್ದಿ

ಮೊಗಪ್ಪೆ- ಕುರ್ಲಪ್ಪಾಡಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು: ಮಾಡುವ ಕೆಲಸ ಚೆನ್ನಾಗಿರಬೇಕು, ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಪರಿಶೀಲನೆ ಮಾಡಬೇಕು, ಅಧರ್ಂಬರ್ದ ಕಾಮಗಾರಿ ನಡೆಸಿ ಸ್ಥಳ ಖಾಲಿ ಮಾಡಬಾರದು, ಯಾರಿಗೂ ಪಸರ್ಂಟೇಜ್ ಕೊಡ್ಲಿಕ್ಕೆ ಇಲ್ಲ ಎಂದು ಶಾಸಕರಾದ ಅಶೋಕ್ ರೈಯವರು ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ್ದಾರೆ.

ಕೊಳ್ತಿಗೆ ಗ್ರಾಮದ ಮೊಗಪ್ಪ ಕುರ್ಲಪ್ಪಾಡಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರ ದುಡ್ಡಿನ ಹಣದಿಂದಲೇ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂಬ ಪರಿಜ್ಞಾನ ಗುತ್ತಿಗೆದಾರನಿಗೆ ಇರಬೇಕು, ಅವರಿಗೆ ಕೊಡ್ಲಿಕ್ಕೆ , ಇವರಿಗೆ ಕೊಡ್ಲಿಕ್ಕೆ ಉಂಟು ಎಂದು ಹೇಳಿ ರಸ್ತೆ ಕಾಮಗಾರಿ ವೇಳೆ ಅಳತೆಯಲ್ಲಿ ವೆತ್ಯಾಸ ಬರಬಾರದು. ಬಿಡುಗಡೆಯಾದ ಅನುದಾನಕ್ಕೆ ಎಷ್ಟು ಉದ್ದದ ರಸ್ತೆಯಾಗುತ್ತದೋ ಅಷ್ಟೇ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮೀಣ ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕಾದರೆ ಗ್ರಾಮಸ್ಥರು ಕಾಮಗಾರಿಯನ್ನು ಪರಿಶೀಲಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮಕ್ಕ, ಉಪಾಧ್ಯಕ್ಷರಾದ ಪ್ರಮೋದ್ ಕೆ ಎಸ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮಲರಾಮಚಂದ್ರ, ಗ್ರಾಪಂ ಸದಸ್ಯ ಪವನ್ ದೊಡ್ಡಮನೆ, ಬಾಲಕೃಷ್ಣ ಕೆಮ್ಮಾರ, ಸುಂದರ ಮಣಿಕ್ಕರ, ಯಶೋಧ ಬಾಬುರಾಜೇಂದ್ರ, ವಸಂತಕುಮಾರ್ ರೈ ದುಗ್ಗಳ, ಶಿವರಾಂ ಪೂಜಾರಿ, ಮುರಳೀಧರ್ ಎಸ್ ಪಿ ಕೆಮ್ಮಾರ, ಮತ್ತಿತರರು ಉಪಸ್ಥಿತರಿದ್ದರು.