Recent Posts

Sunday, January 19, 2025
ಸುದ್ದಿ

ವಿದ್ಯಾರ್ಥಿಗಳ ಎದುರೇ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರ ಬಿಗ್ ಫೈಟ್ – ಕಹಳೆ ನ್ಯೂಸ್

ಸುಳ್ಯ: ವಿದ್ಯಾರ್ಥಿನಿಯರ ಎದುರೇ ಹಿಂದಿ ಶಿಕ್ಷಕ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಹೊಡೆದಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಘಟನೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕಾಗಿ ಹಿಂದಿ ಶಿಕ್ಷಕ, ಮುಖ್ಯೋಪಾಧ್ಯಾಯಿನಿ ಎದುರು ತಗಾದೆ ತೆಗೆದಿದ್ದು ಮಾತಿಗೆ ಮಾತು ಬೆಳೆದಿದೆ.ಈ ಸಂಧರ್ಭದಲ್ಲಿ ಪರಿಸ್ಥಿತಿ ಕೈ ಮೀರಿ ಕೈ ಕೈ ಮಿಲಾಯಿಸಿದ್ದಾರೆ. ವಿದ್ಯಾರ್ಥಿನಿಯರ ಎದುರೇ ಶಿಕ್ಷಕರು ಜಗಳಮಾಡಿಕೊಂಡಿದ್ದು ವಿದ್ಯಾರ್ಥಿನಿಯರನ್ನು ಬೆಚ್ಚಿ ಬೀಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಗಳ ತಡೆಯಲು ಬಂದ ಇತರ ಶಿಕ್ಷಕರಿಗೂ ಹಿಂದಿ ಶಿಕ್ಷಕ ಹಲ್ಲೆ ನಡೆಸಿದ್ದು ಘಟನೆ ಶಾಲಾ ಕೊಠಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆ ಸಂಬಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು