Thursday, January 23, 2025
ಸುದ್ದಿ

ಮಣಿಪಾಲ್ ಮಹಿಳಾ ಸಮಾಜದ ವತಿಯಿಂದ ನಡೆಯುವ ದೀಪಾವಳಿ ಹಬ್ಬ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಚಾಲನೆ – ಕಹಳೆ ನ್ಯೂಸ್

ಉಡುಪಿ : ಮಣಿಪಾಲ್ ಮಹಿಳಾ ಸಮಾಜದ ವತಿಯಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಹಾಲ್ ನಲ್ಲಿ ಆಯೋಜಿಸಲಾದ ಎರಡು ದಿನಗಳ ‘ದೀಪಾವಳಿ ಹಬ್ಬ’ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಡಾ.ವಿದ್ಯಾಕುಮಾರಿ ಅವರು, ಸಾಕಷ್ಟು ಕೆಲಸದ ಒತ್ತಡಗಳಿದ್ದರೂ ಮಹಿಳೆಯರ ಕಾರ್ಯಕ್ರಮ ಎಂಬ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮಣಿಪಾಲ ಮಹಿಳಾ ಸಮಾಜದ ಸಮಾಜಮುಖಿ ಕೆಲಸಕ್ಕೆ ಪ್ರೋತ್ಸಾಹ ನೀಡಬೇಕಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎಂಜಿಎಂ ಕಾಲೇಜಿನ ಪ್ರಾಶುಂಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ್, ಆದರ್ಶ್ ಆಸ್ಪತ್ರೆಯ ನಿರ್ದೇಶಕಿ ವಿಮಲಾ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಡಾ.ಸುಲತಾ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎರಡು ದಿನಗಳ ದೀಪಾವಳಿ ಫೆಸ್ಟ್ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕರಕುಶಲ ವಸ್ತುಗಳು, ಖಾದಿ ಬಟ್ಟೆಗಳು ಸಹಿತ ಜನೋಪಯೋಗಿ ವಸ್ತುಗಳ ಮಳಿಗೆಗಳನ್ನು ತೆರೆಯಲಾಗಿದ್ದು ದೀಪಾವಳಿ ಹಬ್ಬಕ್ಕೆ ಶಾಪಿಂಗ್ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ.