Thursday, January 23, 2025
ಸುದ್ದಿ

ಮಂಗಳೂರು ತಾಲೂಕು ಪಂಚಾಯತ್ ನ ಇ.ಒ., ಮಹೇಶ್ ಕುಮಾರ್ ಹೊಳ್ಳ ಬಂಟ್ವಾಳ ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕರಾಗಿ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮಂಗಳೂರು ತಾ.ಪಂ.ಇ.ಒ ಮಹೇಶ್ ಕುಮಾರ್ ಹೊಳ್ಳ ಅಧಿಕಾರ ಸ್ವೀಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಭಾರ ತಾ.ಪಂ.ಇ.ಒ.ಆಗಿದ್ದ ರಾಜಣ್ಣ ಅವರು ಮಹೇಶ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಬಳಿಕ ಬಂಟ್ವಾಳಕ್ಕೆ ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಅನೇಕ ವರ್ಷಗಳಿಂದ ಇ.ಒ.ಆಗಿದ್ದ ರಾಜಣ್ಣ ಅವರು ಸುಳ್ಯ ತಾ.ಪಂ.ಗೆ ವರ್ಗಾವಣೆಗೊಂಡ ಬಳಿಕ ಬಂಟ್ವಾಳ ತಾ.ಪಂ.ನ ಇ.ಒ.ಹುದ್ದೆಗೆ ನೇಮಕವಾಗಿರಲಿಲ್ಲ. ಸದ್ಯ ರಾಜಣ್ಣ ಅವರನ್ನು ಪ್ರಭಾರ ಇ.ಒ.ಆಗಿ ಕರ್ತವ್ಯ ಮಾಡುವಂತೆ ಜಿಲ್ಲಾಡಳಿತ ಅದೇಶ ಹೊರಡಿಸಿತ್ತು. ಇದೀಗ ಪೂರ್ಣಕಾಲಿಕ ಇ.ಒ.ಆಗಿ ಮಹೇಶ್ ಅವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸರಕಾರ ಅದೇಶ ನೀಡಿದ್ದು, ಸೋಮವಾರ ಅವರು ಕರ್ತವ್ಯಕ್ಕೆ ಹಾಜರಾದರು.