Wednesday, January 22, 2025
ಸುದ್ದಿ

ವಿದ್ಯಾರ್ಥಿಗಳಿಂದ ಸ್ಪೂರ್ತಿ ವಿಶೇಷ ಶಾಲೆಗೆ ಸಹಾಯಧನ ಹಸ್ತಾಂತರ – ಕಹಳೆ ನ್ಯೂಸ್

ಮೂಡುಬಿದಿರೆ : ಸಾರ್ವಜನಿಕ ಗಣೇಶೋತ್ಸವ ಮತ್ತು ಶಾರದ ಮಹೋತ್ಸವದ ಸಂದರ್ಭದಲ್ಲಿ 8 ಮಂದಿ ವಿದ್ಯಾರ್ಥಿಗಳು ಸೇರಿ ಸಹಾಯಕ್ಕಾಗಿ ಸಾರ್ವಜನಿಕರಿಂದ ಧನವನ್ನು ಸಂಗ್ರಹಿಸಿದ್ದು, ಒಟ್ಟಾಗಿರುವ ರೂ 14,860 ಮೂಡುಬಿದಿರೆ ಅರಮನೆ ಬಾಗಿಲಿನಲ್ಲಿ ಸ್ಪೂರ್ತಿ ವಿಶೇಷ ಸಾಮಥ್ಯ 9ದ ಮಕ್ಕಳ ಶಾಲೆಗೆ ಹಸ್ತಾಂತರಿಸಿದರು.

ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳಾದ ತುಷಿತಾ,  ತುಷಾರ, ರಶ್ಮಿತಾ,ತ್ರಿಷಾ, ಅನುಷಾ,ಧನುಷ್, ಶರಣ್ ಮತ್ತು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಕಲ್ಲಬೆಟ್ಟು ಇಲ್ಲಿನ ವಿದ್ಯಾರ್ಥಿ ಚಿತ್ರೇಶ್ ಈ ಉತ್ತಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಪೂರ್ತಿ ವಿಶೇಷ ಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿಗಾರ್ ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಸಹಾಯಧನವನ್ನು ಸ್ವೀಕರಿಸಿ ವಿದ್ಯಾರ್ಥಿಗಳ ಸಹಕಾರದ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು