Thursday, January 23, 2025
ಸುದ್ದಿ

ಕುಟುಂಬ ಮರೆತ ಯುವತಿಗೆ ಪುನರ್ಜನ್ಮ : ವಾಕರ್‌ನಿಂದ ವಾಕ್‌ವರೆಗೆ ನೋವಿನ ಪಯಣ : ವಿಶು ಶೆಟ್ಟಿ ಮಾನವೀಯ ನೆರವಿಗೆ ಪ್ರಶಂಸೆ – ಕಹಳೆ ನ್ಯೂಸ್

ಉಡುಪಿ : ಅಂಗವಿಕಲತೆ ಹೊಂದಿ ನಡೆದಾಡಲು ಸಾಧ್ಯವಾಗದೆ ತನ್ನ ದೈನಂದಿನ ಕೆಲಸಗಳಿಗೂ ಪರರನ್ನು ಅವಲಂಬಿಸಬೇಕಾದ ಯುವತಿಗೆ ಸಮಾಜ ಸೇವಕ ವಿಶು ಶೆಟ್ಟಿ ಅವರ ನೆರವಿನಿಂದ ಕರ‍್ಕಳದ ವಿಜೇತ ವಿಶೇಷ ಶಾಲೆಯಲ್ಲಿ ಆಶ್ರಯ ಪಡೆದು ಇದೀಗ ಯಾರ ಸಹಾಯವಿಲ್ಲದೆಯೂ ನಡೆದಾಡುತ್ತಿದ್ದಾಳೆ. ಈಕೆ ವಾಕರ್‌ನಿಂದ ವಾಕ್‌ವರೆಗೆ ಬಂದಿರುವ ಘಟನೆ ಬಗ್ಗೆ ವಿಶು ಶೆಟ್ಟಿ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕುಂದಾಪುರ ಗ್ರಾಮೀಣ ಮೂಲದ ಸಂಗೀತಾ ಶೆಟ್ಟಿ (25) ಎಂಬ ಈ ಯುವತಿ ಕರ‍್ಕಳದ ವಿಜೇತ ವಿಶೇಷ ಶಾಲೆಯ ಕೌನ್ಸಿಲಿಂಗ್ ಹಾಗೂ ದೈಹಿಕ ವ್ಯಾಯಾಮದಿಂದಾಗಿ ಇದೀಗ ವಾಕರ್ ಕೂಡಾ ಇಲ್ಲದೆ ನಡೆದಾಡುವ ಸ್ಥಿತಿಗೆ ಬಂದಿದ್ದಾಳೆ. ತನ್ನ ದೈನಂದಿನ ಕೆಲಸ ಕರ‍್ಯಗಳನ್ನು ಅನ್ಯರ ಸಹಾಯವಿಲ್ಲದೆ ನಡೆಸುವಷ್ಟು ಸರ‍್ಥಳಾಗಿರುವುದು ನೆಮ್ಮದಿ ತಂದಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಯುವತಿಯನ್ನು ಮರೆತ ಕುಟುಂಬ : ಯುವತಿಯ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಅಂಗವಿಕಲೆಯಾಗಿ ನಡೆದಾಡಲು ಸಾಧ್ಯವಾಗದ ಸಂಗೀತಾ ಶೆಟ್ಟಿ ಆ ಕುಟುಂಬಕ್ಕೆ ಹೊರೆಯಾಗಿ ಪರಿಣಮಿಸಿದ್ದರು. ಈಕೆಗೆ ತಾತ್ಕಾಲಿಕವಾಗಿ ಪುರ‍್ವಸತಿ ಕಲ್ಪಿಸುವಂತೆ ಕುಟುಂಬ ವಿಶು ಶೆಟ್ಟಿ ಅವರಿಗೆ ದುಂಬಾಲು ಬಿದ್ದಿತ್ತು. ವಿಶು ಶೆಟ್ಟಿ ಅವರು ಯುವತಿಗೆ ಚಿಕಿತ್ಸೆ ಹಾಗೂ ಆಶ್ರಯಕ್ಕಾಗಿ ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಐತಾಳ್ ದಂಪತಿಯನ್ನು ಸಂರ‍್ಕಿಸಿ ವಿಷಯ ತಿಳಿಸಿದರು. ತಾತ್ಕಾಲಿಕ ಆಶ್ರಯ ನೀಡಲು ಅವರು ಒಪ್ಪಿದಾಗ ಸಂಗೀತಾ ಶೆಟ್ಟಿ ಅವರನ್ನು ದಾಖಲಿಸಲಾಯಿತು. ಆರಂಭದಲ್ಲಿ ಯುವತಿಯ ಯೋಗಕ್ಷೇಮ ವಿಚಾರಿಸುತ್ತಿದ್ದ ಕುಟುಂಬದ ಸದಸ್ಯರು, ಯಾವಾಗ ಯುವತಿಯನ್ನು ಮನೆಗೆ ಕರೆದೊಯ್ಯುವಂತೆ ತಿಳಿಸಿದಾಗ ಅವರ ರ‍್ತನೆಯೇ ಬದಲಾಯಿತು.

ಸಂಗೀತಾಳನ್ನು ಮನೆಗೆ ಕರೆದೊಯ್ಯುವಂತೆ ವಿಶು ಶೆಟ್ಟಿ ಅವರು ಇಲಾಖೆ, ಸಖಿ ಸೆಂಟರ್ ಅಲ್ಲದೆ ಪೊಲೀಸರ ನೆರವಿನಿಂದ ಸಂಬಂಧಿಕರನ್ನು ಹಲವು ಬಾರಿ ಸಂರ‍್ಕಿಸಿದಾಗ ಉಢಾಫೆ ಉತ್ತರ ಲಭಿಸಿತು. ವಿಶು ಶೆಟ್ಟಿ ಅವರೇ ಸ್ವತ: ಕರೆ ಮಾಡಿದಾಗ ಸಂಗೀತಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ, ನಮ್ಮನ್ನು ಮತ್ತೆ ಸಂರ‍್ಕಿಸಬೇಡಿ ಎಂದು ಕಡ್ಡಿಮುರಿದ ಹಾಗೆ ಹೇಳಿ ಬಿಟ್ಟರು !

ವಿಜೇತ ಶಾಲೆಯಲ್ಲಿ ವಿಜಯಿಯಾದಳು : ಈ ನಡುವೆ ಯುವತಿ ತನ್ನನ್ನು ಮತ್ತೆ ಮನೆಗೆ ಬಿಡಬೇಡಿ ಎಂದು ಅಂಗಲಾಚಿದಾಗ ವಿಶು ಶೆಟ್ಟಿ ಅವರು ಕರ‍್ಕಳದ ವಿಜೇತ ವಿಶೇಷ ಶಾಲೆಯ ಮುಖ್ಯಸ್ಥೆ ಕಾಂತಿ ಹರೀಶ್ ಅವರನ್ನು ಸಂರ‍್ಕಿಸಿದಾಗ ಅವರು ಯುವತಿಗೆ ಆಶ್ರಯ ನೀಡಲು ಒಪ್ಪಿದ್ದಾರೆ. ಇದೀಗ ಸಂಗೀತಾ ಶೆಟ್ಟಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ವಾಕರ್ ಸಹಾಯವಿಲ್ಲದೆಯೂ ನಡೆದಾಡಲು, ತನ್ನ ಕೆಲಸವನ್ನು ಸರ‍್ಥಳಾಗಿದ್ದಾರೆ.

ಯುವತಿಗೆ ಕಾನೂನು ಪ್ರಕ್ರಿಯೆಗಳಿಗೆ ಉಡುಪಿಯ ಸಖಿ ಸೆಂಟರ್ ಹಾಗೂ ಕರ‍್ಕಳದ ಸಾಂತ್ವನ ಕೇಂದ್ರದ ಯಶೋಧಾ ಶೆಟ್ಟಿ ಸಹಕರಿಸಿದ್ದರು.