Thursday, January 23, 2025
ಸುದ್ದಿ

ಪುತ್ತೂರು : KSRTC ಯ ನೂತನ ಡಿಲೆಕ್ಸ್ ಬಸ್ ‘ಪಲ್ಲಕ್ಕಿ’ಗೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( KSRTC) ದಿಂದ ಅತ್ಯಾಕರ್ಷಕ ಬಣ್ಣ ಹಾಗೂ ವಿನ್ಯಾಸಗಳೊಂದಿಗೆ ಲೋಕಾರ್ಪಣೆಗೊಂಡು ಪುತ್ತೂರಿಗೆ ಆಗಮಿಸಿದ ಪಲ್ಲಕ್ಕಿ ನಾನ್ ಎಸಿ ಸ್ಲಿಪರ್ ಬಸ್‌ಗೆ ನ.7ರ ಸಂಜೆ ಪುತ್ತೂರು ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.


ಶಾಸಕ ಅಶೋಕ್ ಕುಮಾರ್ ರೈಯವರು ರಿಬ್ಬನ್ ಕತ್ತರಿಸಿ, ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಬಸ್ ಒಳಗಡೆ ತೆರಳಿ ವಿಶೇಷತೆಗಳನ್ನು ಪರಿಶೀಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಮಾತನಾಡಿದ ಶಾಸಕರು, ಪುತ್ತೂರಿನಿಂದ ಬೆಂಗಳೂರಿಗೆ ಸರಿಯಾದ ಬಸ್‌ಗಳಿಲ್ಲ, ಶಾಲಾ ಮಕ್ಕಳಿಗೆ ಬಸ್ ಇಲ್ಲದಿರುವ ಬಗ್ಗೆಯೂ ಕಳೆದ ಎರಡು ತಿಂಗಳಿನಿAದ ಬೇಡಿಕೆ ಬರುತ್ತಿತ್ತು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ. ಒಟ್ಟು ಹತ್ತು ಪಲ್ಲಕಿ ಬಸ್ ಪುತ್ತೂರಿಗೆ ಬರಲಿದ್ದು, ಎರಡು ಬಸ್ ಈಗಾಗಲೇ ಬಂದಿದೆ. ಉಳಿದ ಬಸ್ ಗಳು ನಿರ್ಮಾಣ ಹಂತದಲ್ಲಿದೆ.ಹAತ ಹಂತವಾಗಿ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ 5 ಸಾರಿಗೆ ಬಸ್‌ಗಳು ಬರಲಿದ್ದು, ಅವಶ್ಯ ಇರುವ ನೆಟ್ಟಣಿಗೆ ಮುಡ್ನೂರು, ಪಾಣಾಜೆ, ಉಪ್ಪಿನಂಗಡಿ, ಶಾಂತಿಮೊಗರು ರೂಟ್ ಗಳಲ್ಲಿ ಇವುಗಳು ಸಂಚರಿಸಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹೊಸ ಬಸ್ ನ್ನು ವಿಟ್ಲ ಪುಣಚ ಹಾಗೂ ಪಾಣಾಜೆ ರಸ್ತೆಗಳಲ್ಲಿ ವಾರದಲ್ಲಿ ಎರಡು ದಿನ ಕಾರ್ಯಾಚರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

60 ಮಂದಿ ಚಾಲಕರನ್ನು ಖಾಸಗಿ ಏಜೆನ್ಸಿ ಮೂಲಕ ನೇಮಕ ಮಾಡಲಾಗಿದೆ. ನಿರ್ವಾಹಕರನ್ನು ಏಜೆನ್ಸಿ ಮೂಲಕ ನೇಮಿಸುವುದು ಅಸಾಧ್ಯ. ನೂರಕ್ಕೂ ಅಧಿಕ ಮಂದಿ ಈಗಾಗಲೇ ವರ್ಗಾವಣೆ ಪಡೆದಿದ್ದು, ಹೊಸ ನೇಮಕಾತಿಯಾಗದೇ ವರ್ಗಾವಣೆ ಆದೇಶ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ಉಚಿತ ಯೋಜನೆಗಳಿಂದ ಹೊಸ ಬಸ್ ಬರುವುದಿಲ್ಲ ಎಂದು ಬೇರೆ ಪಕ್ಷದವರು ಟೀಕೆ ಮಾಡುತ್ತಿದ್ದರು. ಅವರು ಐದು ವರ್ಷದಲ್ಲಿ ಏನೂ ಮಾಡಿಲ್ಲ. ನಾವು ಬಂದ ಬಳಿಕ 10-15 ಬಸ್‌ಗಳು ಬಂದಿದೆ. ಇನ್ನೂ ಹಂತ ಹಂತವಾಗಿ ಬರಲಿದೆ ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾತನಾಡಿ, ನೂತನ ಬಸ್ ರಾತ್ರಿ 9.50ಕ್ಕೆ ಪುತ್ತೂರಿನಿಂದ ಹೊರಡಲಿದೆ. ಶಾಸಕರ ಸೂಚನೆಯಂತೆ ವಾರದಲ್ಲಿ ಎರಡು ದಿನ ಪಾಣಾಜೆ ಮಾರ್ಗವಾಗಿ ಕಾರ್ಯಾಚರಿಸಲಿದೆ.
849 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. ಬೆಂಗಳೂರಿನಿAದ 10 ಗಂಟೆಗೆ ಹೊರಡಲಿದೆ. ಹಿಂದಿನAತೆ ಆಸನವನ್ನು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಹೇಳಿ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ ಆಚಾರ್ಯ, ವಿಭಾಗೀಯ ಯಾಂತ್ರಿಕ ಶಿಲ್ಪಿ ನಂದ ಕುಮಾರ್, ಹಿರಿಯ ಘಟಕ ವ್ಯವಸ್ಥಾಪಕ ಇಸ್ಮಾಯಿಲ್, ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಕೆ ಸೋಮಶೇಖರ, ಸಹಾಯಕ ಲೆಕ್ಕಾಧಿಕಾರಿ ಆಶಾಲತಾ, ಸಹಾಯಕ ಆಡಳಿತಾಧಿಕಾರಿ ರೇವತಿ, ಸಹಾಯಕ ಕಾನೂನು ಅಧಿಕಾರಿ ಸೌಮ್ಯ, ಸಹಾಯಕ ಸಂಖ್ಯಾಧಿಕಾರಿ ಜ್ಯೋತಿ, ಸಿಬ್ಬಂದಿ ಅಧೀಕ್ಷಕ ಮಹಮ್ಮದ್ ಹುಸೈನ್, ಪುತ್ತೂರು ಘಟಕದ ಲೆಕ್ಕಪತ್ರ ಅಧಿಕಾರಿ ಪೂರ್ಣೇಶ್, ಪಾರುಪತ್ತೆ ಅಧಿಕಾರಿ ರಮೇಶ್, ಸಂಚಾರ ನಿಯಂತ್ರಕರಾದ ಕೋಚಣ್ಣ ಪೂಜಾರಿ, ಸುಬ್ರಹ್ಮಣ್ಯ ಭಟ್, ಚಂದ್ರಶೇಖರ, ಗಣೇಶ್ ಕೇಕುಣ್ಣಾಯ, ಮೇಲ್ವಿಚಾರಕ ಅಬ್ಬಾಸ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.