Thursday, January 23, 2025
ಸುದ್ದಿ

ತುಮಕೂರು : ಬಾಲಕಿಯ ಮೇಲೆ ಚಿರತೆ ದಾಳಿ – ಕಹಳೆ ನ್ಯೂಸ್

ತುಮಕೂರು : 7 ವರ್ಷದ ಬಾಲಕಿ ಮೇಲೆ ಚಿರತೆಯೊಂದು ದಾಳಿ ಮಾಡಲು ಮುಂದಾದ ವೇಳೆ ಸಮೀಪದಲ್ಲೇ ಇದ್ದ ತಂದೆ ರಾಕೇಶ್ ಜೋರಾಗಿ ಕೂಗಿಕೊಂಡು ದೊಣ್ಣೆಯೊಂದಿಗೆ ಚಿರತೆಗೆ ಬೆದರಿಸಿದ್ದಾರೆ. ಕೂಡಲೇ ಚಿರತೆ ಮಗುವನ್ನು ಬಿಟ್ಟು ಹೋದ ಘಟನೆ ತುಮಕೂರು ತಾಲೂಕಿನ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಿನ್ನೆ ನಡೆದಿದೆ.


ರಾಕೇಶ್, ಹರ್ಷಿತ ದಂಪತಿಯ ಮಗಳಾದ ಲೇಖನ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಈ ಘಟನೆ ನಡೆದಿದು.್ದ ಬಾಲಕಿಯ ಕಾಲಿಗೆ ಪರಚಿದ ಗಾಯಗಳಾಗಿದ್ದು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು