Thursday, January 23, 2025
ಸುದ್ದಿ

ರಾಷ್ಟ್ರಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ನಾಯಕಿಯಾಗಿ ಕುಂದಾಪುರದ ಕುಮಾರಿ ಪ್ರಾಚಿ.ಪಿ ಆಯ್ಕೆ – ಕಹಳೆ ನ್ಯೂಸ್

ಕುಂದಾಪುರ : ಕುಮಾರಿ ಪ್ರಾಚಿ. ಪಿ. ಇವರು ಬ್ರಹ್ಮಾವರದಲ್ಲಿ ನಡೆದ ಮೈಸೂರು ವಲಯ ಮಟ್ಟದ ಹಾಗೂ ಚಿಕ್ಕೋಡಿಯಲ್ಲಿ ನಡೆದ ರಾಜ್ಯಮಟ್ಟದ 14 ರ ವಯೋಮಾನದ ಬಾಲಕಿಯರ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದ ನಾಯಕಿಯಾಗಿ ಆಯ್ಕೆಯಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಡಿಸೆಂಬರ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಕುಮಾರಿ ಪ್ರಾಚಿ ಪಿ. ಇವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಂಕದಕಟ್ಟೆ ನಿವಾಸಿ ಶ್ರೀಮತಿ ವೈಶಾಲಿ ಮತ್ತು ಪ್ರಶಾಂತ್ ಶೇರಿಗಾರ ರವರ ಪುತ್ರಿಯಾಗಿದ್ದು ಪ್ರಸ್ತುತ ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿರುತ್ತಾರೆ. ಇವರು ಲೆದರ್ ಕ್ರಿಕೆಟ್ ಬಾಲ್ ತರಬೇತಿಯನ್ನು ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರದ ತರಬೇತುದಾರರಾದ ಆರ್ಯನ್ ಅವರಿಂದ ತರಬೇತು ಪಡೆದಿದ್ದು ಪ್ರಸ್ತುತ ಹೆಚ್ಚಿನ ತರಬೇತಿಯನ್ನು ಬ್ರಹ್ಮಾವರ ಎಸ್.ಎಂ.ಎಸ್. ಸ್ಪೋರ್ಟ್ಸ್ ಕ್ಲಬ್ ನ ತರಬೇತುದಾರರಾದ ಶ್ರೀ ಲಿಂಗಪ್ಪ ಸರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.