Monday, November 25, 2024
ಬಂಟ್ವಾಳ

ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯ ನಿರ್ವಹಣಾ ಸಭೆ – ಕಹಳೆ ನ್ಯೂಸ್

ಬಂಟ್ವಾಳ : ಬಿಜೆಪಿ ಬಂಟ್ವಾಳ ಮಂಡಲ ಕಾರ್ಯ ನಿರ್ವಹಣಾ ತಂಡದ ಸಭೆಯು ಇಂದು ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವಪ್ಪ ಪೂಜಾರಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಬಂಟ್ವಾಳ ಮಂಡಲದಲ್ಲಿ ಬಿಜೆಪಿಯ ಇತೀಚಿನ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.

ರಾಜ್ಯ ಬಿಜೆಪಿಯ ಗೌರವಾನ್ವಿತ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಭಾಗವಹಿಸಿ ಮಾತಾಡುತ್ತಾ ” ಬಿಜೆಪಿ ರಾಷ್ಟ್ರಭಕ್ತ ಕಾರ್ಯಕರ್ತರ ಪಾರ್ಟಿಯಾಗಿದ್ದು, ರಾಷ್ಟ್ರಹಿತಕ್ಕಾಗಿ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಮ್ಮ ಹಿರಿಯರು ಶ್ರಮಿಸಿ ಕಟ್ಟಿದ ಪಾರ್ಟಿ ಬಿಜೆಪಿ. ಹಾಗಾಗಿ ಜವಾಬ್ದಾರಿಯ ಕಾರ್ಯಕರ್ತರಾದ ನಮಗೆ ಕಮಲದ ಚಿಹ್ನೆ ಮಾತ್ರ ನಮ್ಮ ಕಣ್ಮುಂದೆ ಇರುತ್ತೆ ಹೊರತು ವ್ಯಕ್ತಿಯಲ್ಲ. ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರು ಉನ್ನತವಾದ ಸ್ಥಾನವನ್ನು ಪಡೆಯುವುದಕ್ಕೆ ಸಾಧ್ಯ. ಇಲ್ಲಿ ಪಕ್ಷಕ್ಕಾಗಿ ಶ್ರಮಿಸುವ ಕಟಿಬದ್ಧ ಕಾರ್ಯಕರ್ತ ಶಾಸಕನಾಗಬಹುದು ಅಥವಾ ಸಂಸದನಾಗಬಹುದು. ಆದರೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ನಮ್ಮ ಪಾರ್ಟಿಯಲ್ಲಿ ಅಭ್ಯರ್ಥಿ ಯಾರೆಂಬುವುದನ್ನು ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಷ್ಟ್ರೀಯ ಸಮಿತಿ ನಿರ್ಧರಿಸುತ್ತಾರೆ. ಹಾಗಾಗಿ ನಮ್ಮ ಕಣ್ಮುಂದೆ ಇರುವ ಧ್ಯೇಯ ಪಥ ನಮ್ಮ ಸದ್ವಿಚಾರಗಳು ಮತ್ತು ಸದುದ್ಧೇಶಗಳು ರಾಷ್ಟ್ರ ಚಿಂತನೆಯ ಆಧಾರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು. ಸನ್ಮಾನ್ಯ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ರಾಷ್ಷ್ಟವನ್ನು ಪರಮ ವೈಭವದ ಸ್ಥಿತಿಗೆ ಕೊಂಡೊಯ್ಯುವುದು. ಅದಕ್ಕಾಗಿ ಕಮಲವನ್ನು ಅರಳಿಸುವ ಕಾರ್ಯ ಮಾಡೋಣ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು


ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್ ರವರು ಮಾತಾಡುತ್ತಾ ” ಪ್ರತಿ ಚುನಾವಣೆಯಿಂದ ಚುನಾವಣೆಗೆ ನಾವು ಬಹಳಷ್ಟು ಪಾಠಗಳನ್ನು ಕಲಿಯುವುದಕ್ಕೆ ಸಾಧ್ಯವಾಗುತ್ತದೆ. ಮುಂದೆ ಬರುವ ರಾಷ್ಟ್ರದ ಭವಿಷ್ಯ ಬರೆಯುವ ಚುನಾವಣೆಗೆ ಕಾರ್ಯಕರ್ತರು ಈಗಲೇ ಸಿದ್ಧರಾಗಬೇಕು. ಭಾರತ ವಿಶ್ವದಲ್ಲಿ ತಲೆ ಎತ್ತಿ ನಿಲ್ಲ ಬೇಕು. ಅದಕ್ಕಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರಾದ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ ” ಎಂದರು. ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆಯವರು ಸಭೆಯನ್ನುದ್ಧೇಶಿಸಿ ಸಂಘಟನಾತ್ಮಕ ಮಾತುಗಳನ್ನಾಡಿದರು.

ಇಂದು ಇಹಲೋಕ ತ್ಯಜಿಸಿದ ರಾಜಕೀಯ ಮುತ್ಸದ್ದಿ, ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವರಾದ ಡಿ.ಬಿ.ಚಂದ್ರೇಗೌಡರಿಗೆ ಮಂಡಲದ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ದೇವದಾಸ್ ಶೆಟ್ಟಿಯವರ ನುಡಿ ನಮನದೊಂದಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ರಾಜ್ಯ ಮಾಧ್ಯಮ ಪ್ರಮುಖರಾದ ವಿಕಾಸ್ ಪುತ್ತೂರುರವರು ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದ ಚುನಾವಣೆ ಮತ್ತು ಮತದಾರರನ್ನು ನೋಂದಾಯಿಸುವ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಭಾರಿಗಳಾದ ಶ್ರೀ ರಾಜೇಶ್ ಕಾವೇರಿ, ಬಂಟ್ವಾಳ ಮಂಡಲ ಪ್ರಭಾರಿ ಶ್ರೀ ಕೊರಗಪ್ಪ ನಾಯ್ಕ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮದಾಸ್ ಬಂಟ್ವಾಳ, ಶ್ರೀಮತಿ ಕಸ್ತೂರಿ ಪಂಜ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸಾದ್ ಕುಮಾರ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರಾಜ್ಯ ಕಿಯೋನಿಕ್ಸಿನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಬಂಟ್ವಾಳ ಮಂಡಲದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಮತ್ತು ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ವಿವಿಧ ಪ್ರಕೋಷ್ಟಗಳ ಸಂಚಾಲಕರು, ಪುರಸಭಾ ಸದಸ್ಯರು, ಮುಂತಾದವರು ಭಾಗವಹಿಸಿದರು.

ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ರವೀಶ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ಪುರುμÉೂೀತ್ತಮ ಶೆಟ್ಟಿ ವಂದಿಸಿದರು. ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಕಿಶೋರ್ ಪಲ್ಲಿಪಾಡಿ ವಂದೇ ಮಾತರಂ ಗೀತೆ ಹಾಡಿದರು ಮತ್ತು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಶ್ರೀ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.