Thursday, January 23, 2025
ಸುದ್ದಿ

ಕ್ರಾಸ್ ಕಂಟ್ರಿಯಲ್ಲಿ ಮೂಡುಬಿದಿರೆಯ ಆಳ್ವಾಸ್ ಗೆ ಸತತ 20ನೇ ವರ್ಷ ಚಾಂಪಿಯನ್ ಶಿಪ್ – ಕಹಳೆ ನ್ಯೂಸ್

ಮೂಡುಬಿದಿರೆ: ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಕಾಲೇಜಿನಲ್ಲಿ ನ.4 ಮತ್ತು 5ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ ಚಾಂಪಿಯನ್ ಶಿಫ್‍ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ 20ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಪುರುಷರ ವಿಭಾಗದಲ್ಲಿ ಮೊದಲ ಆರು ಸ್ಥಾನಗಳನ್ನು ಆಳ್ವಾಸ್ ಕಾಲೇಜು ಓಟಗಾರರು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಚಂದನ್ ಯಾದವ್ (ಪ್ರಥಮ), ಅಂಕಿತ್ ದೇಶ್ವಾಲ್ (ದ್ವಿತೀಯ), ಆಸಿಫ್ ಖಾನ್ (ತೃತೀಯ), ಸುನಿಲ್ ಕುಮಾರ್ (4ನೇ ಸ್ಥಾನ), ಅಕ್ಷಯ್ ಕುಮಾರ್ (5ನೇ ಸ್ಥಾನ), ಅರವಿಂದ್ ಯಾದವ್ ( ಸ್ಥಾನ) ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯರ ವಿಭಾಗದಲ್ಲಿ ಸೋನುನೆ ಪೂನಂ ದಿನಕರ್ (ಪ್ರಥಮ), ಬಸಂತಿ ಕುಮಾರಿ (ದ್ವಿತೀಯ), ಕೆ.ಎಂ.ಸೋನಿಯಾ (ತೃತೀಯ), ಚೈತ್ರಾ ದೇವಾಡಿಗ (4ನೇ ಸ್ಥಾನ), ದಿಶಾ ಬೋರ್ಶೆ (6ನೇ ಸ್ಥಾನ), ಕೆ.ಎಂ. ಅಂಜಲಿ ) ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಪ್ರಸಂಮಿಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು