Thursday, January 23, 2025
ಸುದ್ದಿ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ – ಎಕ್ಸಲೆಂಟ್ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ – ಕಹಳೆ ನ್ಯೂಸ್ 

ಮೂಡುಬಿದಿರೆ:-ಇಲ್ಲಿನ ಪಾಲಡ್ಕದ ಸೈಂಟ್ ಇಗ್ನೇಷೀಯಸ್ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಪ್ರೌಢಶಾಲೆಯು ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ವೈಯಕ್ತಿಕ ವಿಭಾಗದ ಸ್ಪರ್ಧೆಗಳಾದ ಜಾನಪದಗೀತೆ- ಮೌಲ್ಯ ವೈ ಆರ್ ಜೈನ್ ಇಂಗ್ಲೀಷ್ ಭಾಷಣ- ಸುಧಾಶ್ರೀ, ಸಂಸ್ಕçತ ಭಾಷಣ- ಆದಿತ್ಯ, ಸಂಸ್ಕçತ ಧಾರ್ಮಿಕ ಪಠಣ –ವೀಕ್ಷಾ ನಾಯಕ್ ಹಾಗೂ ಗುಂಪು ಸ್ಪರ್ಧೆಯಲ್ಲಿ ಕವ್ವಾಲಿ-ಅನಘಾ ಕಾಮತ್, ಕೃತಿಕಾ ಕಾಮತ್, ದಿವಿಜೇಶ್, ಸುಮಾ ಪೈ, ಅಮೂಲ್ಯ ಈ ಎಲ್ಲಾ ವಿದ್ಯಾರ್ಧಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ಕನ್ನಡ ಭಾಷಣ – ಸಾನಿಧ್ಯ (ದ್ವಿತೀಯ ), ಹಿಂದಿ ಭಾಷಣ –ಅಲ್ಸಿಯಾ (ತೃತೀಯ) ಲಘು ಸಂಗೀತ –ಆಯುಷ್ (ದ್ವಿತೀಯ)ಚರ್ಚಾ ಸ್ಪರ್ಧೆ- ದೀಕ್ಷಾ (ದ್ವಿತೀಯ) ಗಜಲ್-ಆದೀಶ್(ತೃತೀಯ) ಕ್ವಿಜ್- ಪ್ರತೀಶ್ ಗೌಡ, ವಿನಯ್ ಶಂಕರ್ ದ್ವಿತೀಯ ಸ್ಥಾನಗಳನ್ನು ಪಡೆಯುವುದರ ಮೂಲಕ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ ಭಟ್ ಹಾಗೂ ಅಧ್ಯಾಪಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು