ದೆಹಲಿ : ಪ್ರತಿವರ್ಷ ಹಜ್ ಯಾತ್ರೆಗೆ ಹೋಗುವ ಮುಸ್ಲಲ್ಮಾನರಿಗೆ ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ 2018ರಿಂದ ಸಹಾಯಧನ ರದ್ದಾಗಲಿದೆ!
ಹಜ್ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದೆ. ಆ ಕರಡು ನೀತಿಯಲ್ಲಿ ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಗೊಳಿಸುವ ಕುರಿತು ಇದೆ.
ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ನೇತೃತ್ವದ ಸಮಿತಿ ಈ ಕರಡು ನೀತಿಯನ್ನು ರಚಿಸಿದ್ದಾರೆ.
“ಇದೊಂದು ಪಾರದರ್ಶಕ, ಜನಸ್ನೇಹಿ ನೀತಿಯಾಗಿದ್ದು ಇದು ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ರೂಪಿಸಿದ ನೀತಿಯಾಗಿದೆ” ಎಂದು ಕೇಂದ್ರ ಸಚಿವ ನಖ್ವಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ಆದೇಶದಂತೆ ಈ ಸಮಿತಿ ರಚನೆಯಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸುಪ್ರೀಂ ಕೋರ್ಟ್ 2012ರಲ್ಲಿ ಹಜ್ ಯಾತ್ರಿಗಳ ಸಬ್ಸಿಡಿಯನ್ನು ಸ್ವಲ್ಪ ಪ್ರಮಾಣದಲ್ಲೇ ಇಳಿಸುತ್ತು.ಹಾಗೂ 2022ರೊಳಗೆ ಸಂಪೂರ್ಣವಾಗಿ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಸಿದ್ಧಗೊಂಡಿರುವ ಕರಡು ನೀತಿಯಲ್ಲಿನ ಮುಖ್ಯ ಶಿಪಾರಸ್ಸುಗಳು ಕೆಳಗಿನಂತೆ ಮಂಡಿಸಿದ್ದಾರೆ.
* ಹಜ್ ಸಬ್ಸಿಡಿ ರದ್ದು.
* 45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ ನಾಲ್ವರ ತಂಡದೊಂದಿಗೆ ಯಾತ್ರೆ ಕೈಗೊಳ್ಳಬಹುದು.
* 45 ವರ್ಷ ಕ್ಕೆ ಕಡಿಮೆ ವಯಸ್ಸಿನವರು ತಮ್ಮ ಕುಟುಂಬ ವರ್ಗದೊಡನೆ ಯಾತ್ರೆ ಮಾಡಬೇಕು.
* ನಿಗದಿತ ವಿಮಾನ ನಿಲ್ದಾಣಗಳನ್ನು 21ರಿಂದ 9ಕ್ಕೆ ಇಳಿಸುವುದು.
* ಸಬ್ಸಿಡಿ ರದ್ದಿನಿಂದ ಉಳಿದ ಹಣವನ್ನು ಮುಸ್ಲಿಮರ ಶೈಕ್ಷಣಿಕ ಸಬಲೀಕರಣಕ್ಕೆ ಬಳಸಿಕೊಳ್ಳುವುದು.
* ಮುಂದಿನ 5 ವರ್ಷಗಳ ಕಾಲ ಹಜ್ ಕಮಿಟಿ ಮತ್ತು ಖಾಸಗಿ ಸಂಸ್ಥೆಗಳ ಹಜ್ ಕೋಟಾ 70:30ರ ಅನುಪಾತದಲ್ಲಿ ಹಂಚಿಕೆ.
* ಪ್ರಯಣದ ವೆಚ್ಚ ತಗ್ಗಿಸುವ ಸಲುವಾಗಿ ಯಾತ್ರಿಗಳನ್ನು ಹಡಗಿನಲ್ಲಿ ಕಳಿಸುವ ಕುರಿತು ಸೌದಿ ಸರ್ಕಾರದೊಡನೆ ಮಾತುಕತೆ.
ಒಟ್ಟಿನಲ್ಲಿ 2018ರಲ್ಲಿ ಹಜ್ ಯಾತ್ರೆಯ ಸಹಾಯಧನ ರದ್ದಾಗಲಿದೆ.