Monday, November 25, 2024
ಸುದ್ದಿ

ಆಗುಂಬೆ ಘಾಟ್ ಹೆದ್ದಾರಿ ಅಗಲೀಕರಣಕ್ಕೆ ಯೋಜನಾ ವರದಿ ಸಿದ್ಧ : ರಸ್ತೆ ಅಭಿವೃದ್ಧಿಗೆ ಲಕ್ಷಕ್ಕೂ ಮಿಕ್ಕಿ ಗಿಡ ಮರಗಳ ಬಲಿ -ಕಹಳೆ ನ್ಯೂಸ್

ಮಲೆನಾಡು- ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ160ಎ ಆಗುಂಬೆ ಘಾಟ್ ಆಗಲೀಕರಣಕ್ಕೆ ಹೆದ್ದಾರಿ ಪ್ರಾಧಿಕಾರವು ವಿಸ್ತಾರವಾದ ಯೋಜನಾ ವರದಿ ಸಿದ್ಧಪಡಿಸಲು ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಏಜೆನ್ಸಿ ನೇಮಕ ಮಾಡಲು ಹೊರಟಿದೆ. ಇನ್ನೊಂದೆಡೆ ಮಾಳ ಭಾಟ್- ಶೃಂಗೇರಿ ರಸ್ತೆ ವನ್ಯಜೀವಿ ಸಂರಕ್ಷಣಾ ವಿಭಾಗದ ಒಪ್ಪಿಗೆಗೆ ಕಳುಹಿಸಿದೆ.

ಆಗುಂಬೆ ಹಾಗೂ ಮಾಳ ಘಾಟ್ ಹೆದ್ದಾರಿ ಆಗಲೀಕರಣ ಕಾಮಗಾರಿ ಕುದುರೆ ಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಹಾದು ಹೋಗುವುದರಿಂದ ವರಿಸರಕ್ಕೆ ದುಷ್ಪರಿಣಾಮ ಎದುರಾಗಲಿದೆ. ಅರಣ್ಯ ಸಂಪತ್ತು ನಾಶ: ಪ್ರಸ್ತುತ ಹೆದ್ದಾರಿಯು 3.5 ಮೀಟ‌ರ್ ಅಗಲವಿದ್ದು, ಮುಂದೆ ಒಟ್ಟು 10 ಮೀಟರ್‌ಅಗಲೀಕರಣಗೊಳ್ಳಲಿದೆ. ಆಗುಂಬೆ ಘಾಟಿಯಿಂದ ಹೆಬ್ರಿವರೆಗೆ 21 ಕಿ.ಮೀ. ಉದ್ದ, ಮಾಳ ಫಾಟ್‌ನಿಂದ ತನಿಕೋಡು ಚೆಕ್ ಪೋಸ್ ವರೆಗೆ 40 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಈ ಎರಡೂ ಹೆದ್ದಾರಿಗಳ ಇಕ್ಕೆಲಗಳಲ್ಲಿ ಲಕಕ್ಕೂ ಮಿಕ್ಕಿ ಬೆಲೆಬಾಳುವ ಗಿಡಮರಗಳು ಸೇರಿದೆ. ಅವುಗಳು ಈ ಅಭಿವೃದ್ಧಿ ಕಾಮಗಾರಿಯ ಸಂದರ್ಭ ನಾಶವಾಗುವ ಸಾಧ್ಯತೆಗಳು ಇವೆ. ಇದರಲ್ಲಿ ಬಲಿಗೆ, ಪುಂಡಿಕೆ, ಆಯುರ್ವೇದ ಔಷಧೀಯ ಗುಣವುಳ್ಳ ಸಸ್ಯಗಳು ಒಳಗೊಂಡಿವೆ ಎಂದು ಮಾಹಿತಿ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು ಮೂರಕ್ಕೂ ಮಿಕ್ಕಿ ಜಲಪಾತಗಳು, 20ಕ್ಕೂ ಮಿಕ್ಕಿ ಹಳ್ಳಕೊಳ್ಳಗಳು ತನ್ನ ಹರಿವಿನ ದಿಕ್ಕನ್ನು ಬದಲಾಯಿಸಬೇಕಾಗುತ್ತದೆ. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದಾಗಿದೆ. ಇದೆ ಕಾರಣದಿಂದ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಘಾಟಿಯಲ್ಲಿ ಒಟ್ಟು ಹದಿನಾಲ್ಕು ತಿರುವುಗಳಿದ್ದು, ಮೇಲ್ಬಾಗದ ಏಳು ಸುತ್ತುಗಳು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ, ಕೆಳಗಿನ ಎಳು ಸುತ್ತುಗಳು ಉಡುಪಿ ಜಿಲ್ಲಾ ವ್ಯಾಪ್ತಿಗೆ ಸೇರುತ್ತವೆ. ಕುದುರೆಮುಖ ವನ್ಯ ಜೀವಿ ವಿಭಾಗವು ಅತಿಸೂಕ್ಷ್ಮ ವಲಯಗಳಲ್ಲಿ ಒಂದಾಗಿದೆ

ಕಾಡು ನಾಶದಿಂದ ಈಗಾಗಲೇ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ಮಳೆ ಚಳಿಗಾಲದ ಬದಲು ಬೇಸಿಗೆ ಕಂಡುಬರುತ್ತಿದೆ. ಮುಂದಿನ ಭವಿಷ್ಯಕ್ಕೆ ಬರಗಾಲವೇ ಉಡುಗೊರೆಯಾಗಲಿದೆ. ಅರಣ್ಯ ನಾಶವಾಗಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ಯಾವುದೆ ನಿರ್ಣಯ ವು ತಜ್ಞ ರಿಂದ ವಿಚಾರಿಸಲ್ಪಟ್ಟು ಎಲ್ಲರಿಗೂ ಯೋಗ್ಯ ರೀತಿಯಲ್ಲಿ ಆಗಬೇಕು ಎಂದು ಸಾರ್ವಜನಿಕರ ಆಶಯವಾಗಿದೆ.