Saturday, November 23, 2024
ಸುದ್ದಿ

ಕಸಾಯಿಖಾನೆ 15 ಕೋಟಿ ಅನುದಾನ ನೀಡಿರೋದನ್ನು ಖಂಡಿಸುತ್ತೇವೆ: ವಿ.ಹಿಂ.ಪ – ಕಹಳೆ ನ್ಯೂಸ್

ಮಂಗಳೂರು: ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಮಂಗಳೂರು ಇದರ ವತಿಯಿಂದ ಮಂಗಳೂರು ಮಹಾ ನಗರ ಪಾಲಿಕೆ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಮಂಗಳೂರು ಕಸಾಯಿಖಾನೆಗೆ ಯುಟಿ ಖಾದರ್ ಹದಿನೈದು ಕೋಟಿ ರೂಪಾಯಿ ಘೋಷಿಸಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾ ನಿರತ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಯುಟಿ ಖಾದರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಯುಟಿ ಖಾದರ್ ಕಸಾಯಿಖಾನೆಗೆ ಹದಿನೈದು ಕೋಟಿ ನೀಡಿ ಮುಸ್ಲಿಮರ ಓಲೈಕೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ತಮ್ಮ ಭಾಷಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೋ ಹತ್ಯೆ ಮಾಡುವುದರಿಂದ ದಕ್ಷಿಣ ಜಿಲ್ಲೆಯಲ್ಲಿ ಅನೇಕ ಬಾರಿ ಸಂಘರ್ಷವಾಗುತ್ತಿದ್ದು ಯುಟಿ ಖಾದರ್ ಇದಕ್ಕೆ ಅವಕಾಶ ಮಾಡಿಕೊಡಬಾರದೆಂದು ವಿನಂತಿಸಿದರು. ಈ ಪ್ರತಿಭಟನೆ ಕೇವಲ ಇಂದು ಸಾಂಕೇತಿಕವಾಗಿದ್ದು ಯೋಜನೆ ಶುರುವಾದಲ್ಲಿ ಉಗ್ರವಾಗಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮಾತಾಡಿದ ಶರಣ್ ಪಂಪ್‌ವೆಲ್ ಗೋಹತ್ಯೆ ಮಾಡಲು ಅನುವು ಮಾಡಿಕೊಡುವವರಿಗೆ ದೇವಸ್ಥಾನದ ಒಳಗೆ ಪ್ರವೇಶ ಕೊಡಬಾರದು. ಹಿಂದೂಗಳ ಭಾವನೆ ಗೋಹತ್ಯೆಯು ಧಕ್ಕೆಯನ್ನು ಉಂಟುಮಾಡುತ್ತದೆ. ಉಸ್ತುವಾರಿ ಸಚಿವರು ಜಾತ್ಯಾತೀತತೆಯ ಬಗ್ಗೆ ಮಾತನಾಡುತ್ತಾರೆ. ಆದ್ರೆ ಅದರಂತೆ ನಡೆದುಕೊಳ್ಳುವುದಿಲ್ಲ ಎಂದರು.

ಕಸಾಯಿಖಾನೆ 15 ಕೋಟಿ ಅನುದಾನ ನೀಡಿರೋದನ್ನು ಖಂಡಿಸುತ್ತೇನೆ ಅದರ ಬದಲಾಗಿ ಮಂಗಳೂರಿನಲ್ಲಿ ಅದೇ ದುಡ್ಡನ್ನು ರಸ್ತೆ, ಚರಂಡಿ ಹೀಗೆ ನಾನ ಅಭಿವೃದ್ಧಿಗಳಿಗೆ ಬಳಸಬಹುದಿತ್ತೆಂದೆರು.