ನ.08ರಂದು ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಭವಿಷ್ ಘಟಕದ ವತಿಯಿಂದ ಶಿಕ್ಷಕ ವೃತ್ತಿಯ ಕುರಿತು ನಡೆದ ಸಂವಾದ ಕಾರ್ಯಕ್ರಮ – ಕಹಳೆ ನ್ಯೂಸ್
ಕಲ್ಲಡ್ಕ : ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀ ಗೋಪಾಲಕೃಷ್ಣ ನೇರಳಕಟ್ಟೆ ನ.08ರಂದು ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಭವಿಷ್ ಘಟಕದ ವತಿಯಿಂದ ಶಿಕ್ಷಕ ವೃತ್ತಿಯ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಸರ್ಕಾರಿ ಪ್ರೌಢಶಾಲೆ ನಾರ್ಶ ಮೈದಾನದ ಸಹಶಿಕ್ಷಕರಾದ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗೋಪಾಲಕೃಷ್ಣ ನೇರಳಕಟ್ಟೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಜಗತ್ತಿನ ಎಲ್ಲಾ ವೃತ್ತಿಗಳಲ್ಲಿ ಸ್ವರ್ಧಿಸಬಹುದಾದದ್ದು ಶಿಕ್ಷಕ ವೃತ್ತಿ ಮಾತ್ರ.ಯಾಕೆಂದರೆ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಜೀವಂತ ಸಂಬಂಧವನ್ನು ಹೊಂದಿರುತ್ತಾರೆ. ಶಿಕ್ಷಕ ವೃತ್ತಿಯಿಂದ ಮಾತ್ರ ನೈತಿಕತೆ ಉಳಿಸಿಕೊಳ್ಳಲು ಸಾಧ್ಯ. ನೀರಿಗಿಳಿಯದ ಹೊರತು ಈಜು ಕಲಿಯುವುದೆಂತು ಎಂಬಂತೆ ಶಿಕ್ಷಕರಾಗಲು ಅಂಜಿಕೆ ಬೇಡ, ಶಿಕ್ಷಕನು ಶಿಕ್ಷೆಯನ್ನು ನೀಡದೆ, ಸಮಾಜಕ್ಕೆ ಹೇಗೆ ಉತ್ತಮ ನಾಗರಿಕರನ್ನು ಕೊಡಲು ಸಾಧ್ಯ? ಎಂಬ ಮನೋಸ್ಥೈರ್ಯ ತುಂಬುವ ಮಾತುಗಳನ್ನಾಡಿ ವಿದ್ಯಾರ್ಥಿಗಳ ಸಹಭಾಗಿತ್ವವನ್ನು ಪಡೆಯುವ ಮೂಲಕ ಉತ್ತಮ ರೀತಿಯ ಸಂವಾದವನ್ನು ನಡೆಸಿಕೊಟ್ಟರು ಹಾಗೂ ಭವಿಷ್ಯದಲ್ಲಿ ಶಿಕ್ಷಕರಾಗಲು ಬಯಸುವವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣ ಪ್ರಸಾದ್ ಶ್ರೀಮಾನ್ ವಹಿಸಿದ್ದು, ವೇದಿಕೆಯಲ್ಲಿ ಭವಿಷ್ ಘಟಕದ ನಿರ್ದೇಶಕರಾದ ಶ್ರೀಮತಿ ಸಹನಾ ಮಾತಾಜಿ ಹಾಗೂ ಸಹ_ನಿರ್ದೇಶಕರಾದ ಶ್ರೀಮತಿ ಜಯಲಕ್ಷ್ಮಿ ಮಾತಾಜಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರತೀಕ್ಷಾ ತೃತೀಯ ಬಿ.ಕಾಂ ಸ್ವಾಗತಿಸಿ, ಬಿಂದು ದ್ವಿತೀಯ ಬಿ.ಎ ವಂದಿಸಿ ಸೌಮ್ಯಾ ತೃತೀಯ ಬಿ.ಕಾಂ. ನಿರೂಪಿಸಿದರು.