ಇ ಸಿ ಆರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ಪೋಲಿಸರ ಹಲ್ಲೆ ಪ್ರಕರಣ : ಎನ್ ಎಸ್ ಯೂ ಐ ತಂಡದಿಂದ ಸಾಂತ್ವನ – ಕಹಳೆ ನ್ಯೂಸ್
ಉಡುಪಿ : ಇಸಿಆರ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಮೇಲೆ ಪೋಲಿಸರು ನಡೆಸಿದ ಹಲ್ಲೆ ಮತ್ತು ಬೆದರಿಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಎನ್ ಎಸ್ ಯೂ ಐ ವಿದ್ಯಾರ್ಥಿ ಉಡುಪಿ ವಿದ್ಯಾರ್ಥಿಗಳಿಗೆ ಸಾಂತ್ವಾನ ಹಾಗೂ ಧೈರ್ಯ ತುಂಬಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಎನ್ ಎಸ್ ಯು ಐ ಉಪಾಧ್ಯಕ್ಷ ಶರತ್ ಕುಂದರ್ ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಭದಲ್ಲಿ ಕೂಡ ಎನ್ ಎಸ್ ಯು ಐ ಸಂಘಟನೆಯು ಬೆನ್ನೆಲುಬಾಗಿ ನಿಂತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾದರೆ ಅದರ ವಿರುದ್ಧ ಆಡಳಿತ ಮಂಡಳಿ ಇರಲಿ, ಕಾಲೇಜಿನ ಬೋಧಕ ವರ್ಗ ಇರಬಹುದು, ಯಾವುದೇ ಇಲಾಖೆಗಳಿಂದ ಆಗಿರಬಹುದು ವಿದ್ಯಾರ್ಥಿಗಳ ಜೊತೆಗೆ ಸಂಘಟನೆ ಕೈಜೋಡಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರು ಮಾತನಾಡಿ, ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ. ಕಾಲೇಜಿನಲ್ಲಿ ನಡೆಯುತ್ತಿದ್ದ ಕೆಲವು ಚಟುವಟಿಕೆಗಳ ಬಗ್ಗೆ ನಿಮ್ಮ ಸಂಘಟನೆ ಮುಖಾಂತರ ನಮ್ಮ ಗಮನಕ್ಕೆ ಬಂದ ವಿಚಾರವನ್ನು ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷರಾದ ಸೌರಭ್ ಬಲ್ಲಾಳ್ ಉಪಾಧ್ಯಕ್ಷರಾದ ಶರತ್ ಕುಂದರ್ ಹಾಗೂ ಎನ್ ಎಸ್ ಯೂ ಐ ಜಿಲ್ಲಾ ಸಮಿತಿ ಸದಸ್ಯರು ಬ್ಲಾಕ್ ಸದಸ್ಯರು ಸೇರಿದಂತೆ ಮತ್ತು ಮತ್ತಿತರರು ಉಪಸ್ಥಿರಿದ್ದರು.