Recent Posts

Tuesday, November 26, 2024
ಸುದ್ದಿ

ಜಿಲ್ಲಾ ಮಟ್ಟದ ಕ್ರೀಡಾಕೂಟ ; ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ರೋಟರಿ ಆಂಗ್ಲ ಮಾಧ್ಯಮ ಶಾಲೆ, ಮೂಡಬಿದ್ರೆ, ಸ್ಪರಾಜ್ಯ ಮೈದಾನದಲ್ಲಿ ಅಕ್ಟೋಬರ್ 30 ಮತ್ತು 31ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, 3 ವಿಭಾಗದಲ್ಲಿ ಪ್ರಥಮ , 3 ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಗಳೊಂದಿಗೆ ಅನೇಕ ಪದಕಗಳನ್ನುಮತ್ತು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, 10 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

17ರ ವಯೋಮಾನದ ಬಾಲಕರ ವಿಭಾಗ : ಸಾತ್ವಿಕ್ ಆರ್ 10ನೇ ತರಗತಿ -110 ಮೀಟರ್ ಹರ್ಡಲ್ಸ್ ಪ್ರಥಮ. ಸಚಿತ್ ಪಿ.ಕೆ 10ನೇ ತರಗತಿ 400 ಮೀಟರ್ ದ್ವಿತೀಯ , 800 ಮೀಟರ್ ಪ್ರಥಮ. ಯಶ್ವಿತ್ ಡಿ ಪಿ 10ನೇ ತರಗತಿ ಎತ್ತರ ಜಿಗಿತ ದ್ವಿತೀಯ, 4*100 ಮೀಟರ್ ರಿಲೇ ಪ್ರಥಮ. ( ಮನ್ವಿತ್ ನೆ ಕ್ಕರೆ, ಮನೋಹರ ಕೆ, ಸಚಿತ್ ಪಿ ಕೆ ಮತ್ತು ಸಾತ್ವಿಕ್ ಆರ್ ) ಜಿಲ್ಲಾ ಮಟ್ಟದ ಪ್ರಾಥಮಿಕ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ೪ ವಿಭಾಗದಲ್ಲಿ ಪುತ್ತೂರಿಗೆ ಸಮಗ್ರ ಪ್ರಶಸ್ತಿಯನ್ನು ಗಳಿಸಿರುತ್ತಾರೆ.

17ರ ವಯೋಮಾನದ ಬಾಲಕಿಯರ ವಿಭಾಗ : ಡಿಂಪಲ್ ಶೆಟ್ಟಿ 400 ಮೀಟರ್ ಪ್ರಥಮ, ಸಮೃದ್ಧಿ ಜೆ ಶೆಟ್ಟಿ 10ನೇ ತರಗತಿ ಉದ್ದ ಜಿಗಿತ ಪ್ರಥಮ, 100 ಮೀಟರ್ ಹರ್ಡಲ್ಸ್ ದ್ವಿತೀಯ 4*100 ಮೀಟರ್ ರಿಲೇ ದ್ವಿತೀಯ ( ಡಿಂಪಲ್ ಶೆಟ್ಟಿ, ರಿಧಿ ಸಿ ಶೆಟ್ಟಿ, ಕೃತಿ ಕೆ ಮತ್ತು ಸಾನ್ವಿ ಎಸ್ ಪಿ ). ಈ ವಿಭಾಗದಲ್ಲೂ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.

14ರ ವಯೋಮಾನದ ಬಾಲಕರ ವಿಭಾಗ : ಚೇತಸ್ ಪಿ ವೈ 8ನೇ ತರಗತಿ 400 ಮೀಟರ್ ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.

14ರ ವಯೋಮಾನದ ಬಾಲಕಿಯರ ವಿಭಾಗ : ದಿವಿಜ್ಞಾ ಯು ಎಸ್ 8ನೇ ತರಗತಿ 200 ಮೀಟರ್ ಪ್ರಥಮ,400 ಮೀಟರ್ ಪ್ರಥಮ, 600 ಮೀಟರ್ ಪ್ರಥಮ ಹಾಗೂ ಈ ವಿಭಾಗದಲ್ಲಿ 15 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿರುತ್ತಾಳೆ. ಚಿಂತನ ಸಿ 8ನೇ ತರಗತಿ 80 ಮೀಟರ್ ಹರ್ಡಲ್ಸ್ ಪ್ರಥಮ. ಈ ವಿಭಾಗದಲ್ಲಿ ಬಾಲಕಿಯರ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.

14ರ ವಯೋಮಾನದ ಬಾಲಕಿಯರ ಪ್ರಾಥಮಿಕ ವಿಭಾಗ : ಆತ್ಮಿ ಕೆ ಎಲ್ 6ನೇ ತರಗತಿ 100 ಮೀಟರ್ ಪ್ರಥಮ, 200 ಮೀಟರ್ ದ್ವಿತೀಯ. ನಿಧಿ ಶ್ರೀ ಕೆ 7ನೇ ತರಗತಿ 80 ಮೀಟರ್ ಹರ್ಡಲ್ಸ್ ಪ್ರಥಮ, ಶ್ರೀರಕ್ಷಾ 7ನೇ ತರಗತಿ 600 ಮೀಟರ್ ತೃತೀಯ ಸ್ಥಾನ ಗಳಿಸಿರುತ್ತಾರೆ.

ನಮ್ಮ ಶಾಲಾ ವಿದ್ಯಾರ್ಥಿಗಳು 3 ವಿಭಾಗದಲ್ಲಿ ಪ್ರಥಮ , 3 ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಗಳೊಂದಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯ ಗುರುಗಳಾದ ಶ್ರೀಯುತ ಸತೀಶ್ ಕುಮಾರ್ ರೈ ಇವರು ತಿಳಿಸಿರುತ್ತಾರೆ.