ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಪುತ್ತೂರಿನ ಮಿನಿ ವಿಧಾನ ಸೌಧದಲ್ಲಿ ನ.9ರಿಂದ 11ರವರೆಗೆ ದೀಪ ಸಂಜೀವಿನಿ ಕಾರ್ಯಕ್ರಮ – ಕಹಳೆ ನ್ಯೂಸ್
ಪುತ್ತೂರು : ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರ ದಿನ್ ದಯಾಳ್ ಅಂತ್ಯೊದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ, ತಾಲೂಕು ಪಂಚಾಯತ್ ಪುತ್ತೂರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸ್ವ-ಸಹಾಯ ಗುಂಪು ಇವರ ಸಹಯೋಗದೊಂದಿಗೆ ದೀಪ ಸಂಜೀವಿನಿ ಕಾರ್ಯಕ್ರಮವು ನ. 9ರಿಂದ 11ರ ವರೆಗೆ ತಾಲೂಕು ಪಂಚಾಯತ್ ಕಛೇರಿ ಮುಂಭಾಗ, ಮಿನಿ ವಿಧಾನಸೌದ ಪುತ್ತೂರು ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುತ್ತಿರುವುದು. ಆದ್ದರಿಂದ ಇಲ್ಲಿ ಹಣತೆ, ದೀಪದ ಬತ್ತಿ, ಕಾಂಡಲ್, ಕರ್ಪೂರ, ಅಗರಬತ್ತಿ ಮುಂತಾದ ಪೂಜಾ ಸಾಮಾಗರಿಗಳು ರೈತರಿಂದ ನೇರವಾಗಿ ಗ್ರಾಹಕರಿಗೆ ದೊರೆಯುತ್ತದೆ. ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ.