Friday, January 24, 2025
ಸುದ್ದಿ

ಪಡುಮಾರ್ನಾಡ್ ಪಂಚಾಯತ್ ನಲ್ಲಿ ನಡೆದ ಕುಂಭಕಂಠಿಣಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ – ಕಹಳೆ ನ್ಯೂಸ್

ಮೂಡಬಿದಿರೆ : ಕುಂಭಕಂಠಿಣಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಪಡುಮಾರ್ನಾಡ್ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರು ವಹಿಸಿದ್ದರು.

ವೇದಿಕೆಯಲ್ಲಿ ಪಂಚಾಯಿತಿಯ ಅಧ್ಯಕ್ಷರಾದ ವಾಸುದೇವ ಉಪಾಧ್ಯಾಯ ರವರು ಪಂಚಾಯಿತಿಯ ಪಿಡಿಒ ಉಗ್ಗಪ್ಪ ಮೂಲ್ಯರವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕರಾದ ರತಿ ಮೇಡಂ ತಾಲ್ಲೂಕು ಅಭಿಯಾನ ಘಟಕದ ವಲಯ ಮೇಲ್ವಿಚಾರಕರಾದ ಪ್ರಜ್ವತಾ ಮೇಡಂ ಒಕ್ಕೂಟದ ಕಾರ್ಯದರ್ಶಿ ಪಂಚಾಯಿತಿಯ ಸದಸ್ಯರಾದ ಸಿ ಎಸ್ ಕಲ್ಯಾಣಿ ಹಾಗು ಸತೀಶ ಕರ್ಕೇರರವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ನಿರೂಪಣೆ ನಾಗಶ್ರೀ ಯವರು ಮಾಡಿದರು.ಪ್ರಾರ್ಥನೆಯ ನ್ನು ಆಶಾ , ಚೇತನ, ಮಲ್ಲಿಕ ರವರು ಮಾಡಿದರು.ಸ್ವಾಗತ ಭಾಷಣ ವನ್ನು ಸೌಮ್ಯ ರವರು ಮಾಡಿದರು. ವಾರ್ಷಿಕ ವರದಿ ಮಂಡನೆಯನ್ನು ಮಲ್ಲಿಕರವರು ಮಾಡಿದರು. ಲೆಕ್ಕ ಪರಿಶೋಧನೆಯ ವರದಿಯನ್ನು ಜಯಂತಿಯವರು ಮಂಡಿಸಿದರು. ಪ್ರಾಸ್ತಾವಿಕ ನುಡಿಯನ್ನು ಪ್ರಜ್ವತಾ ಮೇಡಂ ಮಾಡಿದರು.ಒಕ್ಕೂಟದ ಅಧ್ಯಕ್ಷ ಹಾಗು ಕಾರ್ಯದರ್ಶಿಯ ವರಗೆ ಸನ್ಮಾನ ಮಾಡಿ ಗೌರವಿಸಲಾಯಿತು. ನೂತನ ಒಕ್ಕೂಟ ರಚನೆ ಪ್ರಜ್ವತಾ ಮೇಡಂ ಮಾಡಿದರು. ನೂತನ ಪದಾಧಿಕಾರಿಗಳಿಗೆ ಹೂವನ್ನು ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಶ್ವೇತ ರವರು ಧನ್ಯವಾದ ಸಮರ್ಪಣೆ ಯನ್ನು ಮಾಡಿದರು

ಜಾಹೀರಾತು
ಜಾಹೀರಾತು
ಜಾಹೀರಾತು