Friday, January 24, 2025
ಸುದ್ದಿ

ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗೆ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಧನುಷ್ ರಾಮ್ ಮತ್ತು ಅಶ್ವಿತ್ ಭಂಡಾರಿ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು : ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಚಾಮರಾಜನಗರದಲ್ಲಿ ನವಂಬರ್ 9 ರಿಂದ 11 ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಚೆಸ್ ಪಂದ್ಯಾಟಕ್ಕೆ ಪುತ್ತೂರು ಕರಿಯಾಲದ ದಿನೇಶ್ ಪ್ರಸನ್ನ ಮತ್ತು ಉಮಾ ದಂಪತಿ ಪುತ್ರನಾದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಧನುಷ್ ರಾಮ್ ಆಯ್ಕೆಗೊಂಡಿದ್ದಾನೆ.


ಹಾಗೆಯೇ ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ದಾವಣಗೆರೆಯಲ್ಲಿ ನ. 10 ಹಾಗೂ 11ರಂದು ನಡೆಯಲಿರುವ ರಾಜ್ಯಮಟ್ಟದ ಖೋ ಖೋ ಪಂದ್ಯಾಟಕ್ಕೆ ಬಂಟ್ವಾಳ ಪುಣಚ ಗ್ರಾಮದ ಜಗದೀಶ್ ಭಂಡಾರಿ ಮತ್ತು ರವೀನ ಭಂಡಾರಿ ದಂಪತಿ ಪುತ್ರ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಶ್ವಿತ್ ಭಂಡಾರಿ ಆಯ್ಕೆಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು