Thursday, January 23, 2025
ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಿ.ಸಿ.ಟ್ರಸ್ಟ್ ಇದರ ವತಿಯಿಂದ ಶ್ರೀನಿಧಿ ಸಂಘದ ಸದಸ್ಯೆ ಶ್ರೀಮತಿ ಸುಜಾತ ಅವರಿಗೆ ಸಹಾಯಧನ ಹಸ್ತಾಂತರ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಿ.ಸಿ.ಟ್ರಸ್ಟ್ ಇದರ ವತಿಯಿಂದ ಪಾಣೆಮಂಗಳೂರು ವಲಯದ ಶಂಭೂರು ಒಕ್ಕೂಟದ ಶ್ರೀ ನಿಧಿ ಸಂಘದ ಸದಸ್ಯರಾದ ಶ್ರೀಮತಿ ಸುಜಾತ ಸತೀಶ್ ಇವರ ಮನೆಗೆ ಸಿಡಿಲು ಬಡಿದು ಹಾನಿಯಾದ ಬಗ್ಗೆ ಪರಿಹಾರ ಚೆಕ್ ನ್ನು ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ವಿತರಿಸಿದರು.

ಈ ಸಂದರ್ಭದಲ್ಲಿ ನರಿಕೊಂಬು ಪಂಚಾಯತ್ ಸದಸ್ಯರಾದ ಪ್ರಕಾಶ್ ಮಡಿಮಗೆರು, ಪಾಣೆಮಂಗಳೂರು ವಲಯ ಮೇಲ್ವಿಚಾರಕಿ ಅನಿತಾ, ಒಕ್ಕೂಟ ಸೇವಾಪ್ರತಿನಿಧಿ ಲಕ್ಷ್ಮೀ ಪ್ರಕಾಶ್, ಜೊತೆಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು