Wednesday, January 22, 2025
ಸುದ್ದಿ

ಬಲ್ನಾಡಿನ ಬೆಳಿಯೂರು ಕಟ್ಟೆ ವೈಕುಂಠಪುರದ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ ಒತ್ತೆಕೋಲಕ್ಕೆ ಸಿದ್ಧತೆ : ನವೆಂಬರ್ ನಲ್ಲಿ ನಡೆಯಲಿದೆ ಸಂಕ್ರಮಣ ಸೇವೆ ಹಾಗೂ ಕೊಳ್ಳಿ ಮುಹೂರ್ತ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಬಲ್ನಾಡಿನ ಬೆಳಿಯೂರು ಕಟ್ಟೆ ವೈಕುಂಠಪುರದ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ, ಫೆಬ್ರವರಿ ತಿಂಗಳಲ್ಲಿ ಒತ್ತೆಕೋಲ ನಡೆಯಲಿದೆ.

ಈ ಹಿನ್ನಲೆಯಲ್ಲಿ ಪೂರ್ವಭಾವಿಯಾಗಿ ನ.16ರಂದು ಸಂಕ್ರಮಣ ಸೇವೆ, ದೈವಗಳಿಗೆ ಪರ್ಬ ತಂಬಿಲ ಹಾಗೂ ಗುಳಿಗ ದೈವಕ್ಕೆ ಅಗೇಲು ಸೇವೆ ನಡೆಯಲಿದೆ. ಜೊತೆಗೆ ಫಬ್ರವರಿಯಲ್ಲಿ ನಡೆಯಲಿರುವ ದೈವಗಳ ನೇಮೋತ್ಸವದ ಸಲುವಾಗಿ ಪೂಜಾರಿಗಳಿಗೆ ಕರ್ಮಿಗಳಿಗೆ ಮತ್ತು ದೈವ ನರ್ತಕರಿಗೆ ವೀಲ್ಯ ಕೋಡುವ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ನ.19 ರಂದು ದೈವಸ್ಥಾನದಲ್ಲಿ ಕೊಳ್ಳಿ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಿ ಶ್ರೀ ವಿಷ್ಣು ಮೂರ್ತಿ ದೇವರ ಕೃಪೆಗೆ ಪಾತ್ರರಾಗುವಂತೆ ಕಾಡ್ಲ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು