ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಉಡುಪಿ ಮಹಾತ್ಮಗಾಂಧಿ ಜಿಲ್ಲಾ ಮೈದಾನ, ಅಜ್ಜರಕಾಡಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವು ನ.2 ಮತ್ತು 3ರಂದು ನಡೆದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಚಿಂತನಾ.ಸಿ ( ಶ್ರೀ ಗಿರೀಶ್ ರಾಜ್ ಮತ್ತು ಡಾ.ಧನೇಶ್ವರಿ ದಂಪತಿ ಪುತ್ರಿ ) -80 ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾಳೆ.
14ರ ವಯೋಮಾನದ ಬಾಲಕಿಯರ ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿ ವಿದ್ಯಾರ್ಥಿನಿ ನಿಧಿಶ್ರೀ ಕೆ(ಶ್ರೀ ದೇರಣ್ಣ ಗೌಡ ಮತ್ತು ಶ್ರೀಮತಿ ಹೇಮಲತ ದಂಪತಿ ಪುತ್ರಿ) 80 ಮೀಟರ್ ಹರ್ಡಲ್ಸ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾಳೆ.
ಪ್ರಥಮ ಸ್ಥಾನ ಪಡೆದ ಚಿಂತನಾ.ಸಿ, ಉತ್ತರ ಪ್ರದೇಶದ ಲಕ್ನೋದಲ್ಲಿ ಡಿ. 16 ರಿಂದ 26ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.