ಬಂಟ್ವಾಳ : ಮಹಿಳೆಯರು ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಸ್ವಾವಲಂಬಿಗಳಾಗಬೇಕು ಹಾಗೂ ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಮಟ್ಟದ ಸಂಜೀವಿನಿ ಅಭಿಯಾನ ದ ವತಿಯಿಂದ ಏರ್ಪಡಿಸಲಾದ ಸ್ವ ಸಹಾಯ ಸಂಘದ ಮಹಿಳಾ ಉದ್ಯಮಿ ಗಳು ತಯಾರಿಸಿದಂತ ಮಣ್ಣಿನ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ (ದೀಪ ಸಂಜೀವಿನಿ) ಕಾರ್ಯಕ್ರಮವು ಮಾದರಿ ಕಾರ್ಯಕ್ರಮವಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ನ ಆಡಳಿತ ಸಹಾಯಕ ನಿರ್ದೇಶಕರಾದ
ವಿಶ್ವನಾಥ್ ಬೈಲಮೂಲೆ ರವರು ತಿಳಿಸಿದರು. ಅವರು ಬಿಸಿರೋಡ್ ರಕ್ತೇಶ್ವರಿ ದೇವಸ್ಥಾನ ದ ಮುಂಭಾಗ ಹಮ್ಮಿಕೊಂಡ ದೀಪ ಸಂಜೀವಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ
ಶ್ರೀ ಮಹೇಶ್ ಕುಮಾರ್ ರವರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ತಾಲೂಕು ಪಂಚಾಯತ್ ಅಧಿಕಾರಿಗಳಾದ ಶ್ರೀಮತಿ ಚಂದ್ರಾವತಿ, ಶ್ರೀ ಪ್ರಕಾಶ್ ಮತ್ತು ತಾಲೂಕು ಅಭಿಯಾನ ಘಟಕದ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತ್ ಒಕ್ಕೂಟಗಳ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.