Recent Posts

Monday, January 20, 2025
ಕ್ರೀಡೆಸುದ್ದಿ

ಗುಜರಾತ್ ಫಾರ್ಚೂನ್ ಜಿಯಾಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ ಗೆಲುವು – ಕಹಳೆ ನ್ಯೂಸ್

ಸೋನಿಪತ್‌: ಹರ್ಯಾಣ ರಾಜ್ಯದ ಸೋನಿಪತ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 2018 ರ 11ನೇ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜಿಯಾಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ 32-25ರ ಗೆಲುವು ದಾಖಲಿಸಿದೆ. ಇಲ್ಲಿಗೆ ಹರ್ಯಾಣಕ್ಕೆ ಲಭಿಸಿದ ಮೊದಲ ಗೆಲುವಿದು.

ನಿನ್ನೆ ನಡೆದ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡ ತವರು ನೆಲವಾದ್ದರಿಂದ ಉತ್ತಮ ಆಟ ಪ್ರದರ್ಶಿಸಿ ಜಯ ತನ್ನಡೆಗೆ ಸೆಳೆದುಕೊಂಡಿತು. ಹರ್ಯಾಣ-ಗುಜರಾತ್ ಝೋನ್ ಎ ಯಲ್ಲಿದ್ದು ಎರಡೂ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿದ್ದವು. ಈ ಪಂದ್ಯದ ಬಳಿಕ ಹರ್ಯಾಣ ಎರಡು ಪಂದ್ಯಗಳಲ್ಲಿ ಒಂದು ಜಯ, ಒಂದು ಸೋಲು ಕಂಡಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು