Thursday, November 28, 2024
ಸುದ್ದಿ

ಆಳ್ವಾಸ್ ಕಾಲೇಜಿನಲ್ಲಿ ಸ್ವಯಂ ಸೇವಕರ ದಿನ ಕುರಿತ ವಿಶೇಷ ಉಪನ್ಯಾಸ – ಕಹಳೆ ನ್ಯೂಸ್

ಮೂಡುಬಿದಿರೆ: ‘ನಮ್ಮ ದೇಶದಲ್ಲಿ ಸೇವೆ ಎಂಬುದನ್ನು ವಿಭಿನ್ನವಾಗಿ ಕಟ್ಟಿಕೊಟ್ಟವರು ಸ್ವಾಮಿ ವಿವೇಕಾನಂದರು’ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಯಂ ಸೇವಕರ ದಿನ-2023ರ ಅಂಗವಾಗಿ ಆಳ್ವಾಸ್ ಕಾಲೇಜಿನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಚಿಗುರು ವಿದ್ಯಾರ್ಥಿ ವೇದಿಕೆ ಆಯೋಜಿಸಿದ ವಿಶೇಷ ಉಪನ್ಯಾಸ- ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತದಲ್ಲಿ ಇನ್ನೊಬ್ಬರಿಗೆ ನಿಸ್ವಾರ್ಥದಿಂದ ಮಾಡುವ ಸಹಾಯಕ್ಕೆ ಸೇವೆ ಎಂದು ಕರೆದರೆ, ವಿದೇಶಗಳಲ್ಲಿ ಇದನ್ನು ಸಾಮಾಜಿಕ ಚಟುವಟಿಕೆ ಎಂದು ಗುರುತಿಸುತ್ತಾರೆ. ಯಾವಾಗ ನಿರೀಕ್ಷೆಗಳು ಶೂನ್ಯವಾಗುತ್ತೋ, ಆಗ ಮಾಡುವ ಸಾಮಾಜಿಕ ಚಟುವಟಿಕೆ ಸೇವೆಯಾಗಿ ಗುರುತಿಸಿಕೊಳ್ಳುತ್ತದೆ’ ಎಂದರು.

‘ಭಗವಂತ ಗರ್ಭಗುಡಿಯಲ್ಲಿ ಇರೋದಿಲ್ಲ, ವ್ಯಕ್ತಿಗಳ ಹೃದಯದಲ್ಲಿರುತ್ತಾನೆ. ಪರಬ್ರಹ್ಮ ಸ್ವರೂಪಿ ಆನಂದ ನೀಡುವ ಏಕೈಕ ಕ್ರಿಯೆ ಸೇವೆ. ಇತರರ ದುಃಖಕ್ಕೆ ಸ್ಪಂದಿಸಿದಾಗ ಸಿಗುವ ಸಂತೋಷ ನಮ್ಮ ಕಷ್ಟಕ್ಕೆ ಸ್ಪಂದಿಸಿದಾಗಲೂ ಸಿಗುವುದಿಲ್ಲ’ ಎಂದರು.
‘ಜೀವ ಸೇವೆಯನ್ನು ಯಾರು ಮಾಡುತ್ತಾರೋ ಅವರು ಶಿವ ಸೇವೆಯನ್ನು ಮಾಡಿದ ಹಾಗೆ. ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಹೃದಯಕ್ಕೆ ಅದ್ಭುತ ಆನಂದ ಸಿಗುತ್ತೆ. ಆತ್ಮಕ್ಕೆ ಆನಂದ ಸಿಗುವುದು ಸೇವೆಯಿಂದ ಮಾತ್ರ’ ಎಂದರು.
‘ಸೇವಾ ಮನೋಭಾವ ಯುವಕರಲ್ಲಿ ಹೆಚ್ಚು ಮೂಡಬೇಕು. ಇದ್ದುದ್ದನ್ನೆಲ್ಲವನ್ನು ಸಮಾಜಕ್ಕೆ ಕೊಟ್ಟು ಗಾಂಧೀಜಿ ಜಗತ್‌ಮಾನ್ಯರಾದರು’ ಎಂದರು.

‘ಭಾರತ ಸೇವಾ ಮಾರ್ಗದಲ್ಲಿ ಅಗ್ರಣಿಯಾಗಿದೆ. ಇಂದು ಭಾರತಕ್ಕೆ ಹೆಚ್ಚು ಶ್ರೇಷ್ಠತೆ ಸಿಕ್ಕಿರುವುದು ಸೇವಾ ಮನೋಭಾವದಿಂದ. ಭಾರತವನ್ನು ಕರಿ ನೇಷನ್ (ಸಾಂಬಾರು ಪದಾರ್ಥಗಳ), ಮೂಢನಂಬಿಕೆಗಳ ದೇಶ, ಬಡವರ ದೇಶ, ಎಂದು ಹೇಳುವ ಪರಿಸ್ಥಿತಿಯಿಂದ ಕೊರೋನಾ ಕಾಲದಲ್ಲಿ ವಿದೇಶಗಳಿಗೆ ಕೊರೋನಾ ಲಸಿಕೆಯನ್ನು ನೀಡುವ ಹಂತಕ್ಕೆ ಬೆಳೆಯಿತು. ಕೊರೋನಾ ಲಸಿಕೆ ಹೊಂದಿದ್ದ ದೇಶಗಳು ಹೆಚ್ಚಿನ ಹಣಕ್ಕೆ ಲಸಿಕೆಯನ್ನು ಮಾರಿದರೆ, ಭಾರತ ಮಾತ್ರ ಔಷಧಿಯನ್ನು ನಿರ್ಮಾಣ ವೆಚ್ಚದಲ್ಲೆ ನೀಡಿದ ಜಗತ್ತಿನ ಏಕೈಕ ದೇಶ’ ಎಂದು ಶ್ಲಾಘಿಸಿದರು.