Recent Posts

Sunday, January 19, 2025
ಸುದ್ದಿ

ದಾಖಲೆ ಮತಗಳೊಂದಿಗೆ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ಭಾರತ ಆಯ್ಕೆ – ಕಹಳೆ ನ್ಯೂಸ್

Wide view of the Hall during the opening of the meeting. 86th plenary meeting Election of five non-permanent members of the Security Council [item 112(a)] (a) By-election (A/71/896) (b) Election of five non-permanent members of the Security Council

ದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅತ್ಯುನ್ನತ ಸಂಸ್ಥೆಗೆ ಭಾರತ ಮೂರು ವರ್ಷಗಳ ಕಾಲಾವಧಿಗೆ ದಾಖಲೆ ಮತಗಳೊಂದಿಗೆ ಆಯ್ಕೆಯಾಗಿದೆ. 188 ಮತಗಳಿಂದ ಭಾರತ ಆಯ್ಕೆಯಾಗಿದೆ.

18 ದೇಶಗಳಿಗಿಂತ ಅತ್ಯಧಿಕ ಮತ ಪಡೆದಿರುವ ಭಾರತ ಇಷ್ಟು ಸಂಖ್ಯೆಯ ಬಹುಮತದೊಂದಿಗೆ ಆಯ್ಕೆಯಾಗಿರುವುದು ಇದೇ ಮೊದಲ ಭಾರಿಯಾಗಿದೆ. ಸಂಯುಕ್ತ ರಾಷ್ಟ್ರಗಳ ಏಷ್ಯಾ-ಪೆಸಿಫಿಕ್ ವಿಭಾಗದ ಮಾನವ ಹಕ್ಕುಗಳ ಮಂಡಳಿಗೆ ಭಾರತವು ಸದಸ್ಯ ದೇಶವಾಗಿ ಆಯ್ಕೆಯಾಗಿದೆ ಎಂದು ವಿಶ್ವಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 193 ಸದಸ್ಯ ದೇಶಗಳು ನಿನ್ನೆ ಮಾನವ ಹಕ್ಕುಗಳ ಮಂಡಳಿಗೆ ನೂತನ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಿದ್ದವು. ರಹಸ್ಯ ಮತದಾನದ ಮೂಲಕ ೧೧೮ ರಾಷ್ಟ್ರಗಳ ಬಹುಮತದೊಂದಿಗೆ ಭಾರತ ಆಯ್ಕೆಯಾಗಿದೆ.