ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ : 9 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ – 9 ವಿದ್ಯಾರ್ಥಿಗಳು ಎಸ್.ಜಿ.ಎಫ್.ಐ ಗೆ ಆಯ್ಕೆ – ಕಹಳೆ ನ್ಯೂಸ್
ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್ ವತಿಯಿಂದ ನಡೆಸಲ್ಪಡುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ದಿನಾಂಕ ನವೆಂಬರ್ 4, ರಿಂದ 8 ರವರೆಗೆ ಬಿಹಾರದ ಬೆಟಿಯಾದಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 11 ವಿದ್ಯಾರ್ಥಿಗಳು ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿ, 9 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಪಡೆಯುವ ಮೂಲಕ 9 ವಿದ್ಯಾರ್ಥಿಗಳು ಎಸ್.ಜಿ.ಎಫ್.ಐ ಗೆ ಆಯ್ಕೆಯಾಗಿದ್ದಾರೆ.
17ರ ವಯೋಮಾನದ ಬಾಲಕಿಯರ ವಿಭಾಗ : ಸಮೃದ್ಧಿ ಜೆ ಶೆಟ್ಟಿ 10ನೇ ತರಗತಿ (ಶ್ರೀ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ನ್ಯಾಯವಾದಿ ಶ್ರೀಮತಿ ಹರಿಣಾಕ್ಷಿ ದಂಪತಿ ಪುತ್ರಿ) 100 ಮೀಟರ್ ಹರ್ಡಲ್ಸ್ ದಲ್ಲಿ ಚಿನ್ನದ ಪದಕ, ಸಾನ್ವಿ ಎಸ್ ಪಿ, 10ನೇ ತರಗತಿ(ಮುಡಿಪಿನಡ್ಕ ನಿವಾಸಿ ಭಾರತೀಯ ಸೇನೆಯಲ್ಲಿ ಯೋಧರಾಗಿರುವ ಶ್ರೀ ಸುಂದರ ಪೂಜಾರಿ ಮತ್ತು ಶ್ರೀಮತಿ ಭವಿತ ದಂಪತಿ ಪುತ್ರಿ) -ತ್ರಿವಿಧ ಜಿಗಿತದಲ್ಲಿ ಚಿನ್ನದ ಪದಕ, 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, ರಿಧಿ ಸಿ ಶೆಟ್ಟಿ, 10ನೇ ತರಗತಿ (ಶ್ರೀ ಚಿದಾನಂದ ಸಿ ಮತ್ತು ಶ್ರೀಮತಿ ಸತ್ಯವತಿ ದಂಪತಿ ಪುತ್ರಿ) – 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, ಡಿಂಪಲ್ ಶೆಟ್ಟಿ 9ನೇ ತರಗತಿ(ಶ್ರೀ ಉದಯ ಕುಮಾರ್ ಶೆಟ್ಟಿ ಮತ್ತು ಶ್ರೀಮತಿ ಸುನೀತಾ ದಂಪತಿ ಪುತ್ರಿ)- 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಕೃತಿ ಕೆ 9ನೇ ತರಗತಿ(ಶ್ರೀ ಕೊರಗಪ್ಪ ಗೌಡ ಮತ್ತು ಶ್ರೀಮತಿ ವನಿತಾ ದಂಪತಿ ಪುತ್ರಿ) – 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 3000 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಅಮೃತಾ ಬಿ.ಎ 9ನೇ ತರಗತಿ(ಶ್ರೀ ಅಮರನಾಥ ಮತ್ತು ಶ್ರೀಮತಿ ಲತಾ ಕುಮಾರಿ ದಂಪತಿ ಪುತ್ರಿ) – 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 3000 ಮೀಟರ್ ಓಟದಲ್ಲಿ ಕಂಚಿನ ಪದಕ, ಎಂ ಪವಿತ್ರ 10ನೇ ತರಗತಿ(ಶ್ರೀ ಕೇಶವದಾಸ್ ಮತ್ತು ಶ್ರೀಮತಿ ಸುಹಾಸಿನಿ ದಂಪತಿ ಪುತ್ರಿ) ಹ್ಯಾಮರ್ ತ್ರೋ ದಲ್ಲಿ ಬೆಳ್ಳಿ ಪದಕವನ್ನು ಪಡೆಯುವುದರೊಂದಿಗೆ ಒಟ್ಟು 40ಅಂಕಗಳೊಂದಿಗೆ 17ರ ವಯೋಮಾನದ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
17ರ ವಯೋಮಾನದ ಬಾಲಕರ ವಿಭಾಗ: ಸಾತ್ವಿಕ್ ಆರ್ 10ನೇ ತರಗತಿ(ಶ್ರೀ ಆರ್.ಸಿ.ನಾರಾಯಣ ರೆಂಜ ಮತ್ತು ಶ್ರೀಮತಿ ಸುಮ ದಂಪತಿ ಪುತ್ರ) 110 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ, ಸಚಿತ್ ಪಿಕೆ 10ನೇ ತರಗತಿ(ಶ್ರೀ ಪ್ರಕಾಶ್ ಮತ್ತು ಶ್ರೀಮತಿ ಸುನೀತಾ ದಂಪತಿ ಪುತ್ರ) 4×400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
17ರ ವಯೋಮಾನದ ಬಾಲಕಿಯರು 4×400 ಮೀಟರ್ ರಿಲೇ ಓಟದಲ್ಲಿ ಒಂದೇ ಸಂಸ್ಥೆಯ 4 ವಿದ್ಯಾರ್ಥಿನಿಯರು ಭಾಗವಹಿಸಿ, ಈ ಹಿಂದಿನ ದಾಖಲೆಯನ್ನು ಸರಿಗಟ್ಟುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಇದಲ್ಲದೆ 14ರ ವಯೋಮಾನದ ಬಾಲಕರ ವಿಭಾಗದಲ್ಲಿ 400ಮೀ ಓಟದಲ್ಲಿ ಚೇತಸ್.ಪಿ.ವೈ, 8ನೇ ತರಗತಿ (ಶ್ರೀ ಯೋಗೀಶ್.ಪಿ ಮತ್ತು ಶ್ರೀಮತಿ ಕೇಸರಿ ದಂಪತಿ ಪುತ್ರ) ಹಾಗೂ 17ರ ವಯೋಮಾನದ ಬಾಲಕರ ವಿಭಾಗದ ಗುಂಡು ಎಸೆತ ದಲ್ಲಿ ಮಿಲನ್.ಎನ್.ಬಿ, 10ನೇ ತರಗತಿ (ಶ್ರೀ ನವೀನ್ ಬಂಗೇರ ಮತ್ತು ಶ್ರೀಮತಿ ವತ್ಸಲಾ ದಂಪತಿ ಪುತ್ರ) ಭಾಗವಹಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ತಿಳಿಸಿದ್ದಾರೆ.