ಸಮಾಜ ಮಂದಿರ ಸಭಾ (ರಿ) , ಯುವ ವಾಹಿನಿ ಘಟಕದ ವತಿಯಿಂದ ಬೆದ್ರ ಗೂಡು ದೀಪ, ರಂಗೋಲಿ ಸ್ಪರ್ಧೆ-2023 – ಕಹಳೆ ನ್ಯೂಸ್
ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ) , ಯುವ ವಾಹಿನಿ ಘಟಕದ ವತಿಯಿಂದ ಸಮಾಜ ಮಂದಿರದಲ್ಲಿ ಬೆದ್ರ ಗೂಡು ದೀಪ, ರಂಗೋಲಿ ಸ್ಪರ್ಧೆ-2023 ಸಮಾಜಮಂದಿರದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಸಮಾಜ ಮಂದಿರ ಸಭಾ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪರಂಪರೆಯ ಬೆಳಕು ಎಲ್ಲೆಡೆ ಪಸರಿಸಿ ಸುಖ ಸಮೃದ್ಧಿ ನೆಮ್ಮದಿ ಸಿಗಲಿ ಎಂದು ಹಾರೈಸಿ, ದೀಪಾವಳಿ ಸಂದೇಶ ನೀಡಿದರು.
ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಗಣೇಶ ಅಮೀನ್ ಸಂಕಮಾರ್ ದೀಪಾವಳಿಯ ಬಗ್ಗೆ ಮಾತನಾಡಿ ಅಂದಿನ ಕಾಲದಲ್ಲಿ ಹಿರಿಯರಿಗೆ ಬಡತನವಿತ್ತು. ಆದರೆ ಸಕಾಲದಲ್ಲಿ ಹಸಿವೆ, ಸೊಗಸಾದ ನಿದ್ದೆಯ ನೈಜ್ಯ ಶ್ರೀಮಂತಿಕೆಯಿತ್ತು. ಕೂಡು ಕುಟುಂಬಗಳ ಚಿತ್ರಣ ಕರಗಿ ಹೋಗುತ್ತಿದ್ದಂತೆ ಇಂದು ಹಬ್ಬಗಳ ಬೆಳಕು, ಸಂಭ್ರಮ ಕ್ಷೀಣವಾಗುತ್ತಿದೆ. ಓದುವ ದಾರಿದ್ರ್ಯ ಎದುರಾಗಿ ಮನಸ್ಸು ಖಾಲಿಯಾಗಿದೆ ಎಂದು
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ, ರತ್ನ ವುಮೆನ್ ಕ್ಲಿನಿಕ್ನ ಡಾ. ರಮೇಶ್, ಸಮಾಜ ಮಂದಿರ ಸಭಾ ಕಾರ್ಯದರ್ಶಿ ಹೆಚ್. ಸುರೇಶ್ ಪ್ರಭು, ರೋಟರಿ ಮಿಡ್ ಟೌನ್ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್,ಯುವ ವಾಹಿನಿ ಕಾರ್ಯದರ್ಶಿ ವಿದೇಶ್ ಎಂ, ಡಾ. ಮುರಳೀಕೃಷ್ಣ ವಿ. ಉಪಸ್ಥಿತರಿದ್ದರು.
ಸನ್ಮಾನ : ಸ್ಪೂರ್ತಿಭಿನ್ನ ಸಾಮಥ್ಯ೯ದ ಮಕ್ಕಳ ಶಾಲಾ ಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಅವರನ್ನು ಸಮ್ಮಾನಿಸಲಾಯಿತು. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಶ್ ಎ ಅವರನ್ನು ಗೌರವಿಸಲಾಯಿತು.
ಯುವವಾಹಿನಿ ಅಧ್ಯಕ್ಷ ಸುಶಾಂತ್ ಕರ್ಕೇರಾ ಸ್ವಾಗತಿಸಿದರು. ನವಾನಂದ ಬಹುಮಾನಿತರ ವಿವರ ನೀಡಿದರು. ಹರೀಶ್ ಕೆ. ಸಮ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಶಂಕರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಮಂದಿರ ಸಭಾದ ಜತೆ ಕಾರ್ಯದರ್ಶಿ ಎಂ. ಗಣೇಶ ಕಾಮತ್ ವಂದಿಸಿದರು.
ಬಹುಮಾನಿತರು:
ಗೂಡುದೀಪ ಸ್ಪರ್ಧೆ ಸಾಂಪ್ರದಾಯಿಕ : 1. ದಾಮೋದರ ಕಟೀಲ್ 2. ದಕ್ಷತ್ ಕಟೀಲ್, 3. ಕೀರ್ತನ್ ಪೂಜಾರಿ ಬೋಳ
ಆದುನಿಕ ಗೂಡುದೀಪ: 1. ಆಶಾ ಅಚ್ಚರಕಟ್ಟ, 2. ಐಶ್ವರ್ಯ ಒಂಟಿಕಟ್ಟೆ 3. ಭೋಜ ಅಚ್ಚರ ಕಟ್ಟ
ಮಾದರಿ ಗೂಡುದೀಪ: 1. ವಿಠಲ್ ನೀರು ಮಾರ್ಗ 2. ಆರಾಧ್ಯ ಅಲಂಕಾರು 3. ಪದ್ಮನಾಭ ಕಾಮತ್ ಮೂಡುಬಿದಿರೆ,ರಂಗೋಲಿ: 1. ಕೋಕಿಲ 2. ಸೌಮ್ಯ 3. ಶ್ರಾವ್ಯ