Recent Posts

Wednesday, February 5, 2025
ಸುದ್ದಿ

ಕಾಡುಪೊದೆಗಳ ಮಧ್ಯೆ ಅಂದರ್ ಬಾಹರ್ ಆಡುತ್ತಿದ್ದ 7 ಜನ ಅರೆಸ್ಟ್ – ಕಹಳೆ ನ್ಯೂಸ್

ಮಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಆಡುತ್ತಿದ್ದ 7 ಮಂದಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ರಾಜಾಸಾಬ್ ನದಾಫ್, ಕಂಠೇಶ್ ಬಿ.ಮೇಲಿನ ಮನಿ, ತಿಮ್ಮಣ್ಣ ವಡ್ಡರ್, ಕಲ್ಲಪ್ಪ, ಶರಪ್ಪ, ಶಿವಾನಂದ, ವೀರೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು 62 ನೇ ತೋಕೂರು ಗ್ರಾಮದ ತೋಕೂರು ರೈಲು ನಿಲ್ದಾಣದ ಸಮೀಪದ ಕಾಡುಪೊದೆಗಳ ಮಧ್ಯೆ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬoಧಿತರಿoದ 5,220 ರೂ. ನಗದು ಸೇರಿ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು